ಹೈದರಾಬಾದ್: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಕ್ಕೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್‍ಎಂಸಿ) ಸದಸ್ಯರೊಬ್ಬರನ್ನು ನಾಂಪಲ್ಲಿ ನ್ಯಾಯಾಲಯವು ಅನರ್ಹಗೊಳಿಸಿ ಆದೇಶ ಹೊರಡಿಸಿದೆ.
ಟಿಆರ್‍ಎಸ್‍ಗೆ ಸೇರಿದ ಕಚೆಗುಡ ಕಾರ್ಪೋರೇಟರ್ ಎಕ್ಕಲ ಚೈತನ್ಯ ಕಣ್ಣ ಅವರನ್ನು ಕೋರ್ಟ್ ಅನರ್ಹಗೊಳಿಸಿದೆ. ಜಿಎಚ್‍ಎಂಸಿ ಕಾಯ್ದೆ 2009 ರ ಸೆಕ್ಷನ್ 21 ಬಿ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಹಾನಗರ ಪಾಲಿಕೆ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.
Advertisement
Advertisement
ಕಣ್ಣ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಅಫಿಡವಿಟ್‍ನಲ್ಲಿ ತಮಗೆ ಕೇವಲ ಇಬ್ಬರು ಮಕ್ಕಳಿದ್ದಾರೆ ಎಂದು ಉಲ್ಲೇಖಿಸಿದ್ದರು. ಮಾಜಿ ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ಕೆ.ರಮೇಶ್ ಯಾದವ್ ಅವರು ಕಣ್ಣ ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಜೊತೆಗೆ ಮೂವರು ಮಕ್ಕಳಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಿದ್ದರು.
Advertisement
Advertisement
ಟಿಆರ್‍ಎಸ್ ಕಾರ್ಪೊರೇಟರ್ ಅವರು ಅಫಿಡವಿಟ್‍ನಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದರು. ಹೀಗಾಗಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕಣ್ಣ ಅವರಿಗೆ ಮೂರು ಮಕ್ಕಳಿದ್ದಾರೆ. ಹೀಗಾಗಿ ಸುಮಾರು ಮೂರೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ಕಾರ್ಪೊರೇಟರ್ ಅವರನ್ನು ಅನರ್ಹಗೊಳಿಸಿದೆ ಎಂದು ಯಾದವ್ ತಿಳಿಸಿದ್ದಾರೆ.