ಬೆಂಗಳೂರು: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೃಷ್ಣಯ್ಯ ಶೆಟ್ಟಿ ಸೇರಿದಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಕೃಷ್ಣಯ್ಯ ಶೆಟ್ಟಿ, ಎಂಟಿವಿ ರೆಡ್ಡಿ, ಮುನಿರಾಜು, ಶ್ರೀನಿವಾಸ ತಪ್ಪಿತಸ್ಥರು ಎಂದು ಆದೇಶ ಹೊರಡಿಸಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.
Advertisement
2012 ರಲ್ಲಿ ಖಾಸಗಿ ಬ್ಯಾಂಕ್‌ಗೆ ಗ್ಯಾಂಗ್ ವಂಚನೆ ಮಾಡಿತ್ತು. ಆರೋಪಿಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿತ್ತು.
Advertisement
ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಸಾಲವನ್ನು ಕೃಷ್ಣ ಶೆಟ್ಟಿ ಪಡೆದುಕೊಂಡಿದ್ದರು.