ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ 4 ವರ್ಷದ ಹೆಣ್ಣು ಮಗುವನ್ನು ದಂಪತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ದಂಪತಿ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ 4 ವರ್ಷದ ಹೆಣ್ಣು ಮಗುವಿಗೆ ಹುಷಾರಿಲ್ಲ ಎಂದು ಗೋಕುಲ ಗ್ರಾಮದಲ್ಲಿ ವಾಸವಿದ್ದ ದಾದಪೀರ್ ಶೇಕ್ ಹಾಗೂ ಪೂಜಾ ಠಾಕೂರ್ ದಂಪತಿ ಕಿಮ್ಸ್ ಗೆ ಕರೆತಂದಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಮಗು ಬಳಲುತ್ತಿದ್ದರಿಂದ ವೈದರು ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಆದ್ದರಿಂದ ಮಗು ರಾತ್ರಿಯೇ ಮೃತಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ದಾದಾಪೀರ್ ದಂಪತಿ ಮಗು ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
Advertisement
Advertisement
ನಂತರ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ದಂಪತಿ ಆಸ್ಪತ್ರೆಗೆ ಮಗುವನ್ನು ದಾಖಲಿಸುವಾಗ ನೀಡಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಂಪತಿಯನ್ನು ಹುಡುಕಲು ಮುಂದಾಗಿದ್ದಾರೆ. ಆಗ ಗೋಕುಲ ಗ್ರಾಮದಲ್ಲಿ ದಂಪತಿ ವಾಸವಿದ್ದ ಬಾಡಿಗೆ ಮನೆ ಬಳಿ ಹೋದಾಗ, ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜೊತೆಗೆ ದಾದಾಪೀರ್ ರೌಡಿಶೀಟರ್ ಎಂಬ ವಿಚಾರ ಕೂಡ ಗೊತ್ತಾಗಿದೆ. ಈಗಾಗಲೇ ದಾದಾಪೀರ್ ವಿರುದ್ಧ ಹಲವು ಪ್ರಕರಣಗಳು ಇರುವುದರಿಂದ ಪೊಲೀಸರು ದಂಪತಿಯ ವರ್ತನೆ ಮೇಲೆ ಅನುಮಾನಗಳು ವ್ಯಕ್ತಪಡಿಸಿದ್ದಾರೆ.
Advertisement
ದಂಪತಿ ನಿಜವಾಗಿಯೂ ಅವರ ಮಗುವನ್ನೇ ಆಸ್ಪತ್ರೆಗೆ ದಾಖಲಿಸಿದ್ದರಾ? ಮಗುವಿನ ಮೃತದೇಹ ಬಿಟ್ಟು ದಂಪತಿ ಪರಾರಿಯಾಗಿದ್ದೇಕೆ? ಮಗು ಸಾವನ್ನಪ್ಪಿದ ಬಳಿಕ ಮನೆ ಖಾಲಿ ಮಾಡಿದ್ದೇಕೆ? ಹೀಗೆ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.