ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಎಂಟ್ರಿಯಾಗಿದ್ದು, ನಗರಸಭೆ ಚುನಾವಣೆಯಲ್ಲಿ ಎರಡು ಕುಟುಂಬದ ಪತಿ ಹಾಗು ಪತ್ನಿಯರು ಪ್ರತ್ಯೇಕ ವಾರ್ಡ್ ಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಕಳೆದ ಬಾರಿಯ ನಗರಸಭೆಯ ಅಧ್ಯಕ್ಷರಾಗಿದ್ದ ಗೊಪ್ಪೆ ಮಂಜುನಾಥ್ ಅವರು ಪಕ್ಷೇತರ ಅಭ್ಯರ್ಥಿಯಾಗಿ 11ನೇ ವಾರ್ಡ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಅವರ ಪತ್ನಿ ಜಯಂತಿ 14 ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ.
Advertisement
ಬಿಜೆಪಿಯಿಂದಲೂ ಮತ್ತೊಂದು ದಂಪತಿ ಸ್ಪರ್ಧಿಸಿದ್ದು, 16ನೇ ವಾರ್ಡ್ ನಿಂದ ಮಾಜಿ ನಗರಸಭಾ ಸದಸ್ಯ ವೆಂಕಟೇಶಪ್ಪ ಹಾಗು 19 ನೇ ವಾರ್ಡ್ ನಿಂದ ಅವರ ಪತ್ನಿ ತಿಪ್ಪಮ್ಮ ಕೂಡ ಅಖಾಡದಲ್ಲಿದ್ದು, ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಗರಸಭೆಗೂ ಕುಟುಂಬ ರಾಜಕೀಯ ಎಂಟ್ರಿ ಕೊಟ್ಟಂತಾಗಿದೆ.
Advertisement
ಹಿಂದುಳಿದಿರುವ ಕೋಟೆನಾಡನ್ನ ಅಭಿವೃದ್ಧಿ ಪಡಿಸುವಲ್ಲಿ ನಾಯಕರು ವಿಫಲರಾಗಿದ್ದಾರೆ ಎನ್ನುವ ಆರೋಪ ಇದೆ. ಈಗ ನಗರಸಭೆ ಅಖಾಡದ ಮೂಲಕ ಹೊಸದಾಗಿ ರಾಜಕೀಯ ಪ್ರವೇಶ ಮಾಡಿರುವ ಮಹಿಳಾ ಮಣಿಗಳು ಎಷ್ಟರಮಟ್ಟಿಗೆ ಅವರಿಗೆ ಸಿಕ್ಕಿರುವ ಜವಬ್ದಾರಿಯನ್ನ ನಿರ್ವಹಿಸುವರೋ ಎಂಬ ಕುತೂಹಲ ಜನರಲ್ಲಿ ಮೂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv