ತಿರುವನಂತಪುರಂ: 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಹಲವರು ತಮ್ಮ ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಯುವಕ ಹಾಗೂ ಯುವತಿ ನಡುವೆ ಪ್ರೀತಿಯಾಗಿದ್ದು, ಈ ವರ್ಷದಲ್ಲಿ ಮದುವೆ ಆಗಿದ್ದಾರೆ.
2018ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಪಾಲಕ್ಕಾಡ್ ನಿವಾಸಿಯಾಗಿರುವ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಸೂರ್ಯ ಅವರು ಅಲುವಾದಲ್ಲಿನ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಅವರು ಅಲುವಾ ನಿವಾಸಿ ವಿನೀತ್‍ರನ್ನು ಭೇಟಿ ಆಗಿದ್ದರು. ವಿನೀತ್ ಪ್ರವಾಹ ಪರಿಹಾರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.
Advertisement
Advertisement
ಈ ವೇಳೆ ಸೂರ್ಯ ಹಾಗೂ ವಿನೀತ್ ನಡುವೆ ಸ್ನೇಹ ಆಗಿದೆ. ಬಳಿಕ ಸ್ನೇಹ ಪ್ರೀತಿಗೆ ತಿರುಗಿ 2019ರ ಪ್ರವಾಹದ ನಂತರ ಇಬ್ಬರು ಮದುವೆಯಾಗಿದ್ದಾರೆ. ಸೂರ್ಯ ಹಾಗೂ ವಿನೀತ್ ಭಾನುವಾರ ಅಲುವಾ ಅಶೋಕಾಪುರಂ ದುರ್ಗಾ ಭಗವತಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಕಾರ್ಮೆಲ್ ಸೆಂಟ್ ಫ್ರಾನ್ಸಿಸ್ ಡಿ ಅಸ್ಸಿಸಿ ಶಾಲೆಯಲ್ಲಿ ಸ್ಥಾಪಿಸಲಾದ ಅಲುವಾ ಪರಿಹಾರ ಶಿಬಿರದಲ್ಲಿ ಸೂರ್ಯ ಅವರು ಕರ್ತವ್ಯ ನಿರ್ವಹಿಸಿದ್ದರು. ಅಶೋಕಪುರಂನಲ್ಲಿದ್ದ ತನ್ನ ಮನೆ ಪ್ರವಾಹದಲ್ಲಿ ಮುಳುಗಿದ್ದರಿಂದ ವಿನೀತ್ ಪರಿಹಾರ ಕೇಂದ್ರಕ್ಕೆ ತಲುಪಿದ್ದರು. ಪರಿಹಾರ ಕೇಂದ್ರದಲ್ಲಿ ವಿನೀತ್ ತನ್ನ ತಂದೆ-ತಾಯಿ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಪರಿಹಾರ ಕೇಂದ್ರಕ್ಕೆ ಬರುತ್ತಿದ್ದ ಜನರ ಸಹಾಯಕ್ಕೆ ವಿನೀತ್ ಮುಂದಾಗುತ್ತಿದ್ದರು.