ಕಲಬುರಗಿ: ನಗರದ ಇಕ್ಬಾಲ್ ಕಾಲೋನಿಯಲ್ಲಿನ ಬೆಂಕಿ ದುರಂತದಿಂದ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸೈಯದ್ ಅಕ್ಬರ್ (44) ಹಾಗೂ ಶೈನಾಜ್ ಬೇಗಂ (36) ಮೃತಪಟ್ಟ ದಂಪತಿ. ಬುಧವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಶೇ 80 ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಂಪತಿಯ ಸಾವಿನಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ನಗರದ ಇಕ್ಬಾಲ್ ಕಾಲೋನಿಯಲ್ಲಿನ ಮನೆಗೆ ಬುಧವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆ ಸುಟ್ಟು ಹೋಗಿತ್ತು. ಈ ವೇಳೆ ಮನೆಯಲ್ಲಿದ್ದ ಸೈಯದ್ ಅಕ್ಬರ್, ಶೈನಾಜ್ ಬೇಗಂ ಹಾಗೂ ಮಕ್ಕಳಾದ ಸೈಯದ್ ಯಾಸಿನ್, ಸಾನಿಯಾ ಬೇಗಂ ಎಂಬವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಘಟನೆ ಸಂಬಂಧ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.