ಚಿಕ್ಕಮಗಳೂರು: ಮನೆ ಬಾಡಿಗೆಗೆ ಬಂದ ಜೋಡಿ ಮನೆ ಮಾಲೀಕರಿಂದಲೇ 46 ಲಕ್ಷ ರುಪಾಯಿ ವಸೂಲಿ ಮಾಡಿದ ಘಟನೆ ಚಿಕ್ಕಮಗಳೂರಿನ ಶಂಕರಪುರದಲ್ಲಿ ನಡೆದಿದೆ.
ಅಜೀಜ್ ಹಾಗು ಜ್ಯೋತಿ ಅನ್ನೋರು ಲಿವಿಂಗ್ ಟುಗೆದರ್ ರಿಲೇಷನ್‍ಶಿಪ್ ಇಟ್ಕೊಂಡಿದ್ದು, ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದೀವಿ ಅಂತ ಹೇಳಿ ರೇಣುಕಮ್ಮ ಅನ್ನೋರ ಮನೆಗೆ ಬಾಡಿಗೆಗೆ ಬಂದ್ರು. ಆದ್ರೆ ರೇಣುಕಮ್ಮನವರ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಖತರ್ನಾಕ್ ಜೋಡಿ ನಿಮ್ಮ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದಕ್ಕೆ ಅವರು ಸತ್ತು ಹೋದ್ರು ಎಂದೆಲ್ಲಾ ಹೇಳಿದ್ದರು.
Advertisement
Advertisement
ನಿಮಗೂ, ನಿಮ್ಮ ಮಕ್ಕಳಿಗೂ ಮಾಟ-ಮಂತ್ರ ಮಾಡಿಸಿದ್ದಾರೆ. ಆಂಧ್ರದಲ್ಲಿ ಪವರ್‍ಫುಲ್ ಸ್ವಾಮೀಜಿ ಹತ್ರ ಹೋದ್ರೆ ನಿಮ್ಮ ಕಷ್ಟವೆಲ್ಲಾ ಬಗೆಹರಿಯುತ್ತೆ ಅಂತ ಹೇಳಿ 46 ಲಕ್ಷ ಹಣ ಕಿತ್ತಿದ್ದರು.
Advertisement
Advertisement
ಕೊನೆಗೆ ಸಿಸಿಟಿವಿ ಪರಿಶೀಲಿಸಿದಾಗ ಇವರೇ ಆ ಕೆಲಸ ಮಾಡಿರೋದು ಗೊತ್ತಾಗಿದೆ. ಈ ನಯವಂಚಕರ ಬಗ್ಗೆ ಗೊತ್ತಾಗ್ತಿದ್ದಂತೆ ರೇಣುಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.