ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

Public TV
3 Min Read
rings for valentines day

ವ್ಯಾಲೆಂಟೈನ್ಸ್ ಡೇ ಗೆ ಹೆಚ್ಚು ದಿನ ಉಳಿದಿಲ್ಲ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಯೋಚನೆ ನೀವು ಮಾಡಿಯೇ ಇರುತ್ತೀರಿ. ಆದರೆ ಏನು ನೀಡುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಇರುವ ಒಂದು ಬೆಸ್ಟ್ ಆಪ್ಶನ್ ಕಪಲ್ ರಿಂಗ್ಸ್.

ಕೇವಲ ಯಾವುದೋ ಒಂದು ಸಾಮಾನ್ಯ ಉಂಗುರ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀಡಿದರೆ ಚೆನ್ನಾಗಿರುತ್ತಾ? ಸ್ವಲ್ಪ ಯೋಚಿಸಿ. ನೀವು ನೀಡುವ ಉಡುಗೊರೆ ವಿಶೇಷವಾಗಿದ್ದರೆ ಮಾತ್ರವೇ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಬಹುದು ಅಲ್ಲವೇ?

ring for valentines day

ಇತ್ತೀಚೆಗೆ ಕೆಲವು ಟ್ರೆಂಡ್‌ನಲ್ಲಿರುವ ಕಪಲ್ ರಿಂಗ್‌ಗಳ ಡಿಸೈನ್ ಹೀಗಿವೆ. ಇವುಗಳಲ್ಲಿ ನಿಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಆಯ್ಕೆ ಮಾಡಿ ಅಂತಹುದನ್ನೇ ಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಅವರನ್ನು ಖುಷಿಪಡಿಸಬಹುದು. ಈಗಿನ ಟ್ರೆಂಡ್‌ನಲ್ಲಿರುವ ವಿವಿಧ ಡಿಸೈನ್‌ನ ಕಪಲ್ ರಿಂಗ್ಸ್ ಹೀಗಿವೆ:

ಕಿಂಗ್ ಆಂಡ್ ಕ್ವೀನ್ ಕಪಲ್ ರಿಂಗ್ಸ್:
ರಾಜ ಹಾಗೂ ರಾಣಿಯರ ಕಿರೀಟದ ವಿನ್ಯಾಸವಿರುವ ಉಂಗುರಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಪ್ರೇಮಿಗಳ ದಿನದಂದು ಇದನ್ನು ನಿಮ್ಮನ್ನು ಇಷ್ಟ ಪಡುವವರಿಗೆ ನೀಡಿದರೆ ಅವರು ಖಂಡಿತವಾಗಿಯೂ ವಿಶೇಷ ಅನುಭವ ಪಡೆಯುತ್ತಾರೆ. ನಿಜ ಜೀವನದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ರಾಜ ಅಥವಾ ರಾಣಿಯಂತೆ ನೋಡುತ್ತೀರಿ ಎಂಬ ಅರ್ಥವನ್ನೂ ಇದು ನೀಡುತ್ತದೆ.

king and queen couple rings

ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ ಉಂಗುರಗಳೆಂದರೆ ಅದು ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್. ಎರಡು ಉಂಗುರಗಳನ್ನು ಒಟ್ಟಿಗೆ ತಂದಾಗ ಅಯಸ್ಕಾಂತದ ಸಣ್ಣ ತುಂಣುಕಿನಿಂದಾಗಿ ಉಂಗುರಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಅದೊಂದು ಸಂಪೂರ್ಣ ಹೃದಯದ ಆಕಾರ ಪಡೆಯುತ್ತದೆ. ಉಂಗುರಗಳನ್ನು ಬಿಡಿಸಿದಾಗ ಸಂಪೂರ್ಣ ಹೃದಯವೂ ಬಿಡಿಸಿಕೊಳ್ಳುತ್ತದೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

magnetic heart couple rings

ಪ್ರೀತಿಸುವವರು ಒಟ್ಟಾಗಿದ್ದಾಗ ಮಾತ್ರವೇ ಸಂಪೂರ್ಣವಾಗಲು ಸಾಧ್ಯ ಎಂಬ ವಿಶೇಷ ಸಂದೇಶ ಈ ಉಂಗುರಗಳು ನೀಡುತ್ತವೆ. ವಿಶೇಷ ಸಂದೇಶ ಸಾರುವ ಜೋಡಿ ಉಂಗುರಗಳನ್ನು ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆ ನೀಡುವುದರಿಂದ ಅವರೂ ಸಂತೋಷ ಪಡುತ್ತಾರೆ.

ಹೆಸರು ಬರೆದ ಜೋಡಿ ಉಂಗುರಗಳು:
ಉಂಗುರಗಳಲ್ಲಿ ಅಂದದ ಫಾಂಟ್‌ನಲ್ಲಿ ವೈಯಕ್ತಿಕ ಹೆಸರನ್ನು ಕೆತ್ತಿಸಿ, ಅದನ್ನು ಉಡುಗೊರೆ ನೀಡಿದರೆ ಸಂತೋಷ ಯಾರಿಗೆ ತಾನೇ ಆಗಲ್ಲ? ಉಡುಗೊರೆ ಪಡೆದುಕೊಂಡವರು ನೀಡಿದವರ ಹೃದಯದಲ್ಲಿ ಎಷ್ಟು ಮುಖ್ಯವಾದ ಸ್ಥಾನ ಕೊಟ್ಟಿದ್ದಾರೆ ಎಂಬುದು ಮನದಟ್ಟಾಗುವುದು ಖಂಡಿತಾ. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

personalised names couple rings

ದೂರದ ಜೋಡಿಗಳ ಉಂಗುರ:
ನಿಮ್ಮ ಪ್ರೀತಿ ಲಾಂಗ್ ಡಿಸ್ಟೆನ್ಸ್‌ನದ್ದಾ? ಹಾಗಿದ್ದರೆ ಈ ಉಂಗುರಗಳು ನಿಮಗಾಗಿಯೇ ಹೇಳಿ ಮಾಡಿಸಿರುವಂತಹವುಗಳು. ಜೋಡಿಗಳು ದೂರವಿದ್ದರೂ ಹೃದಯದಲ್ಲಿ ವಿಶೇಷ ಸ್ಥಾನ ನೀಡುವುದು ಸಾಮಾನ್ಯದ ಮಾತಲ್ಲ. ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟಕರ. ಹೀಗಿರುವಾಗ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭೂಮಿಯ ನಕ್ಷೆಯ ಚಿತ್ರವಿರುವ ಉಂಗುರವನ್ನೇ ಉಡುಗೊರೆ ಕೊಡಿ. ಅದನ್ನು ತೊಟ್ಟುಕೊಂಡವರು ಪ್ರತಿಬಾರಿ ಉಂಗುರವನ್ನು ಗಮನಿಸಿದಾಗ ನಿಮ್ಮನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ.

world map couple rings

ಜೋಡಿಗಳಿಗೆ ಲವ್ ಬರ್ಡ್ಸ್ ಉಂಗುರಗಳು:
ನೀವು ಪರಿಸರ ಪ್ರೇಮಿಯೇ? ಪ್ರಾಣಿ-ಪಕ್ಷಿಗಳೆಂದರೆ ನಿಮಗೆ ಹಾಗೂ ನಿಮ್ಮ ಪ್ರೇಮಿಗೆ ಇಷ್ಟವೇ? ಹಾಗಿದ್ದರೆ ಲವ್ ಬರ್ಡ್ಸ್ ಚಿತ್ರವಿರುವ ಉಂಗುರಗಳನ್ನು ನೀಡಿ. ನಿಮ್ಮ ಪ್ರೀತಿ ಪಾತ್ರರು ಇದನ್ನು ಜೀವನದ ಅಮೂಲ್ಯ ಆಭರಣವೆಂದುಪರಿಗಣಿಸುತ್ತಾರೆ.

love birds couple rings

ಹೆಸರಿನ ಮೊದಲ ಅಕ್ಷರದ ಕಪಲ್ ರಿಂಗ್‌ಗಳು:
ಹೆಸರಿನ ಮೊದಲ ಅಕ್ಷರ ಹೊಂದಿರುವ ಕಪಲ್ ರಿಂಗ್ಸ್ ಹಿಂದಿನಿಂದಲೂ ಟ್ರೆಂಡ್ ಹುಟ್ಟಿಸಿರುವ ಉಂಗುರಗಳೇ ಆಗಿವೆ. ಆದರೆ ಅವುಗಳ ವಿನ್ಯಾಸಗಳಲ್ಲಿ ಬದಲಾವಣೆಗಳು ಬಂದಿವೆ. ಹೆಸರಿನ ಮೊದಲ ಅಕ್ಷರದ ಉಂಗುರಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಫ್ಯಾಶನ್‌ಪ್ರೇಮಿಗಳು ಈ ವಿನ್ಯಾಸದ ಉಂಗುರಗಳ ಉಡುಗೊರೆ ನೀಡುವುದು ಬೆಸ್ಟ್ ಚಾಯ್ಸ್. ಇದನ್ನೂ ಓದಿ: ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

letter couple rings

ಮ್ಯೂಜಿಕಲ್ ನೋಟ್‌ನ ಜೋಡಿ ಉಂಗುರಗಳು:
ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ? ಇಷ್ಟ ಇಲ್ಲ ಎನ್ನುವವರನ್ನು ಹುಡುಕುವುದೂ ಕಷ್ಟ. ಸಂಗೀತವನ್ನು ಇಷ್ಟ ಪಡುವ ಜೋಡಿಗಳು ತಮ್ಮ ಪ್ರೇಮಿಗಳಿಗೆ ಸಂಗೀತದ ಟಿಪ್ಪಣಿಗಳನ್ನು ನಮೂದಿಸಿರುವ ವಿನ್ಯಾಸದ ಉಂಗುರ ನೀಡಿದರೆ ಚೆನ್ನಾಗಿರುತ್ತದೆ.

musical design couple rings

ನಿಮಗೂ ನಿಮ್ಮ ಪ್ರೇಮಿಗೂ ಈ ರೀತಿಯಾಗಿ ತಮ್ಮ ತಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಉಡುಗೊರೆ ನೀಡಿ, ಈ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿಕೊಳ್ಳಿ.

Share This Article
Leave a Comment

Leave a Reply

Your email address will not be published. Required fields are marked *