ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿಮೀರುತ್ತಿದೆ. ಒಂಟಿ ಮಹಿಳೆಯರು, ಒಬ್ಬಂಟಿಗರನ್ನ ಸುಲಿಗೆ ಮಾಡುತ್ತಿದ್ದ ಖದೀಮರು ಇದೀಗ ಆಟೋಚಾಲಕರ ಮೇಲೆ ಬಿದ್ದಿದ್ದಾರೆ.
ಮೊಬೈಲ್ ಕಳುವಾಗಿದೆ ಎಂಬ ನೆಪವೊಡ್ಡಿದ ನಾಲ್ಕು ಜನ ಅಪರಿಚಿತರ ಗ್ಯಾಂಗ್, ಆಟೋಚಾಲಕ ಸುರೇಶ್ ಎಂಬವರನ್ನು ಥಳಿಸಿದ್ದಾರೆ. ಈ ವೇಳೆ ಸುರೇಶ್ ತಮ್ಮ ಮೊಬೈಲ್ ಕೊಡಲು ನಿರಾಕರಿಸಿದ್ದಾರೆ. ಪರಿಣಾಮ ಸುರೇಶ್ರವರ ಆಟೋವನ್ನ ಕಲ್ಲಿನಿಂದ ಜಜ್ಜಿ ಪುಡಿ ಮಾಡಿದ್ದಾರೆ.
Advertisement
Advertisement
ಈ ವೇಳೆ ಏಟು ತಿನ್ನುತ್ತಿದ್ದ ಸುರೇಶ್ರವರ ಚೀರಾಟ ಕೇಳಿ ಪೂರ್ಣಿಮಾ-ಗಿರೀಶ್ ದಂಪತಿ ಆಟೋ ಚಾಲಕನ ನೆರವಿಗೆ ಧಾವಿಸಿ ರಕ್ಷಿಸಿದ್ದಾರೆ. ಬಳಿಕ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.
Advertisement
ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದೆ.