ತೈವಾನ್: ಜೋಡಿಯೊಂದು ಅಸಭ್ಯವಾಗಿ ಮ್ಯೂಸಿಯಂನ ಮೇಲ್ಛಾವಣಿಯ ಮೇಲೆ ಸೆಕ್ಸ್ ಮಾಡಿರುವ ಘಟನೆ ತೈವಾನ್ನಲ್ಲಿ ನಡೆದಿದೆ.
ತೈವಾನ್ನ ತೈನಾನ್ ಆರ್ಟ್ ಮ್ಯೂಸಿಯಂನ ಮೇಲ್ಛಾವಣಿಯ ಮೇಲೆ ಜೋಡಿ ಸೆಕ್ಸ್ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆದ ನಂತರ ಪೊಲೀಸರು ಈ ಕುರಿತು ತನಿಖೆ ಶುರು ಮಾಡಿದ್ದಾರೆ.
Advertisement
Advertisement
ಈಗಾಗಲೇ ಪೊಲೀಸರು ವಿಡಿಯೋದಲ್ಲಿರುವ ಜೋಡಿಯನ್ನು ಪತ್ತೆ ಮಾಡಿದ್ದು, ಆತನಿಂದ ಹೇಳಿಕೆಯನ್ನು ತೆಗೆದುಕೊಂಡಿದ್ದಾರೆ. ಇನ್ನೂ ಮಹಿಳೆಯನ್ನು ಗುರುತಿಸಿ ಆಕೆಯನ್ನು ತನಿಖೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೇ ಜೋಡಿ ತಮ್ಮ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸೆಕ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
ಸೋಶಿಯಲ್ ಮೀಡಿಯಾದಲ್ಲಿ ಜೋಡಿಯ ಸೆಕ್ಸ್ ವಿಡಿಯೋಗೆ ಕೆಲವರು ಫನ್ನಿಯಾಗಿ ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಜೋಡಿಯ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.