ವಾಷಿಂಗ್ಟನ್: ಕುಡಿದು ವಾಹನ ಚಲಾಯಿಸಿದ್ದಾರೆ ಎಂಬ ಅನುಮಾನದ ಮೇಲೆ ಪೊಲೀಸರು ಜೋಡಿಯನ್ನು ಬಂಧಿಸಿದ್ದರು. ಆದರೆ ಜೋಡಿ ಪೊಲೀಸ್ ಕಾರಿನಲ್ಲಿಯೇ ದೈಹಿಕ ಸಂಬಂಧ ಬೆಳೆಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಆರನ್ ಥಾಮಸ್ ಹಾಗೂ ಮೇಘನ್ ಮೊಂಡನಾರೊ ದೈಹಿಕ ಸಂಬಂಧ ಬೆಳೆಸಿದ ಜೋಡಿ. ಆರನ್ ಹಾಗೂ ಮೇಘನ್ ಪೊಲೀಸ್ ಕಾರಿನಲ್ಲೇ ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ನೋಡಿದ ಪೊಲೀಸರು ಆಘಾತಗೊಂಡಿದ್ದರು. ಸದ್ಯ ಪೊಲೀಸರು ಜೋಡಿಯ ಮೇಲೆ ಡಿಯುಐ(ಡ್ರೈವಿಂಗ್ ಅಂಡರ್ ದಿ ಇನ್‍ಫ್ಲುಯೆನ್ಸ್) ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮೇಘನ್ ಹಾಗೂ ಆರನ್ ಹೆಡ್‍ಲೈಟ್ ಆನ್ ಮಾಡದೇ ಬೈಕ್ ಚಲಾಯಿಸುತ್ತಿದ್ದರು. ದಕ್ಷಿಣ ಫ್ಲೆಚರ್ ಅವೆನ್ಯೂ ರಸ್ತೆಯಲ್ಲಿ ಕಾರಿನಿಂದ ಆಗುವ ಅಪಘಾತದಿಂದ ತಪ್ಪಿಸಿಕೊಂಡಿದ್ದಾಗ ನಾವು ಇಬ್ಬರನ್ನು ಬಂಧಿಸಿದ್ದೇವೆ. ನಮ್ಮ ಅಧಿಕಾರಿ ಅವರನ್ನು ಎಳೆದಾಗ ಅವರು ಕುಡಿದು ಬೈಕ್ ಚಲಾಯಿಸುತ್ತಿದ್ದಾರೆ ಎಂದು ಎನಿಸಿತು. ಆಗ ನಾವು ಇಬ್ಬರಿಗೂ ನಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದ್ದೇವು ಎಂದು ಪೊಲೀಸ್ ಅಧಿಕಾರಿ ನಸ್ಸೌ ಕೌಂಟಿ ಹೇಳಿದ್ದಾರೆ.
ನಾನು ಸ್ಕ್ಯಾಡ್ ಕಾರಿನ ಹೊರಗೆ ಕಾಯುತ್ತಿದ್ದ ವೇಳೆ ಆರನ್ ಹಾಗೂ ಮೇಘನ್ ದೈಹಿಕ ಸಂಬಂಧ ಬೆಳೆಸುತ್ತಿದ್ದರು. ಆಗ ನಾನು ಕಾರಿನ ಡೋರ್ ತೆಗೆದು ಅವರನ್ನು ನಿಲ್ಲಿಸಿದೆ. ಈ ವೇಳೆ ಆರನ್ ನಗ್ನನಾಗಿದ್ದು, ಮೇಘನ್ ತನ್ನ ಪ್ಯಾಂಟ್ ಬಿಚ್ಚಿದ್ದಳು. ಇಬ್ಬರನ್ನು ಅಥವಾ ಒಬ್ಬರನ್ನು ಕಾರಿನಿಂದ ಹೊರಗೆ ಕರೆದುಕೊಂಡು ನಿರ್ಧರಿಸಿದ್ದೇವು. ನಾವು ಆರನ್‍ನನ್ನು ಹೊರಗೆ ಕರೆತರಲು ಪ್ರಯತ್ನಿಸುತ್ತಿದ್ದಾಗ ಆತ ಓಡಿ ಹೋಗಲು ಯತ್ನಿಸಿದ್ದಾನೆ. ಬಳಿಕ ನಾವು ಹತ್ತಿರದ ಪಾರ್ಕಿಂಗ್ ಲಾಟ್‍ನಲ್ಲಿ ಆತನನ್ನು ಹಿಡಿದಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.