ತುಮಕೂರು: ರೆಸ್ಟೊರೆಂಟ್ ತೆರೆಯಲು ಲೈಸೆನ್ಸ್ ಗಾಗಿ ಅಲೆದು ಅಲೆದು ಬೇಸತ್ತ ದಂಪತಿ ಕೊನೆಗೆ ಪಟ್ಟಣ ಪಂಚಾಯತ್ ಬಾಗಿಲಲ್ಲೇ ಹೊಟೇಲ್ ತೆರೆದು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ ಪಂಚಾಯತ್ ದ್ವಾರದಲ್ಲಿ ಪ್ರಭಾಕರ್-ಇಂದಿರಾ ದಂಪತಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅನ್ನ ಸಾಂಬಾರ್, ಚಪಾತಿ, ಪರೋಟಾ ತಯಾರಿಸಿ ಮುನ್ಸಿಪಲ್ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪ್ರಭಾಕರ- ಇಂದಿರಾ ದಂಪತಿ 2014 ರಲ್ಲಿ ಮಾಯಸಂದ್ರ ರಸ್ತೆಯಲ್ಲಿ ಶ್ರಿನಿಧಿ ಗ್ರೀನ್ ಲ್ಯಾಂಡ್ ಹೆಸರಿನಲ್ಲಿ ರೆಸ್ಟೊರೆಂಟ್ ತೆರೆದಿದ್ರು. ಅದಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಸೂಚನೆಯಂತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆದಿದ್ರು. ಸುಮಾರು ನಾಲ್ಕು ತಿಂಗಳು ರೆಸ್ಟೊರೆಂಟ್ ತೆರೆದಿತ್ತು. ಆಗ ಕ್ಯಾತೆ ತೆಗೆದ ಪಟ್ಟಣ ಪಂಚಾಯತ್ ಅಧಿಕಾರಿಗಳು, ರೆಸ್ಟೊರೆಂಟ್ ಜಮೀನು ವಿವಾದ ಕೋರ್ಟ್ ನಲ್ಲಿದೆ ಎಂದು ಸಬೂಬು ಹೇಳಿ ಏಕಾಏಕಿ ರೆಸ್ಟೊರೆಂಟ್ ಗೆ ಬೀಗ ಹಾಕಿದ್ದಾರೆ ಎನ್ನುವುದು ಪ್ರಭಾಕರ್ ದಂಪತಿಯ ಆರೋಪ.
Advertisement
ಅಲ್ಲಿಂದ ಕಳೆದ ಮೂರು ವರ್ಷದಿಂದ ಪರವಾನಗಿ ನೀಡುವಂತೆ ದಂಪತಿ ಪಟ್ಟಣ ಪಂಚಾಯತಿಗೆ ಅಲೆದು ಅಲೆದು ಬೆಸತ್ತು ಈಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಪರವಾನಗಿ ಕೊಡದಿರಲು ಕಾಂಗ್ರೆಸ್ ಮುಖಂಡ ಟಿ.ಎನ್.ಶಿವರಾಜರೇ ಕಾರಣ ಎಂದು ಪ್ರಭಾಕರ್ ಆರೋಪಿಸಿದ್ದಾರೆ.