ಮೈಸೂರು: ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ವಯೋವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75) ಬರ್ಬರ ಹತ್ಯೆಯಾದ ದಂಪತಿ. ಇವರನ್ನು ಮೈಸೂರು ಹುಣಸೂರು ಮುಖ್ಯ ರಸ್ತೆ ಸಮೀಪ ಇರೋ ತೋಟದ ಮನೆಯಲ್ಲಿ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ದಂಪತಿ ಕಳೆದ 3 ದಿನಗಳ ಹಿಂದೆಯಷ್ಟೆ ನೂತನ ಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಮನೆ ನಿರ್ಮಾಣಕ್ಕಾಗಿ ತಂದಿದ್ದ ವಸ್ತುಗಳನ್ನು ತೋಟದ ಮನೆಯಲ್ಲಿ ಇಟ್ಟಿದ್ದರು. ಹೀಗಾಗಿ ತೋಟದ ಮನೆಯಲ್ಲೆ ಕಾವಲಾಗಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ದಂಪತಿ ತಮ್ಮ ಬಳಿ ಇದ್ದ 5 ಎಕರೆ ಮಾವಿನ ತೋಟವನ್ನ ಕೆಲದಿನಗಳ ಹಿಂದಷ್ಟೆ ಬೇರೊಬ್ಬರಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು. ಅದರಲ್ಲಿ 50 ಲಕ್ಷ ಹಣವನ್ನು ಮುಂಗಡವಾಗಿ ಸಹ ಪಡೆದಿದ್ದರು. ಈ ಹಣ ತೋಟದ ಮನೆಯಲ್ಲಿ ಇಟ್ಟಿದ್ದಾರೆಂದು ತಿಳಿದು ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಇಲವಾಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.