ಭುವನೇಶ್ವರ್: ಯುವ ಜೋಡಿಯನ್ನು ಐದಾರು ಯುವಕರು ಥಳಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಒಡಿಶಾದ ನಯಾಗರ್ ದ ರಘುನಾಥ್ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಆವರಣದಲ್ಲಿ ಐದಾರು ಯುವಕರು ಯುವ ಜೋಡಿಯನ್ನು ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಯುವ ಜೋಡಿಯನ್ನು ಥಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಜೋಡಿಯನ್ನು ಥಳಿಸುತ್ತಿರುವ ವಿಡಿಯೋ 1.49 ನಿಮಿಷಗಳಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಯುವಕರು ಅವರ ಮೇಲೆ ದೇವಸ್ಥಾನದ ಆವರಣದಲ್ಲೇ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
Advertisement
Advertisement
ಆ ಯುವಕರು ಇಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಅಲ್ಲದೇ ನಿಮ್ಮ ಪೋಷಕರ ಮೊಬೈಲ್ ನಂಬರ್ ಕೊಡಿ ಅವರಿಗೆ ನಿಮ್ಮ ಈ ಪ್ರೀತಿಯ ವಿಷಯವನ್ನು ಹೇಳುತ್ತೇವೆ ಎಂದು ಹೇಳಿ ಥಳಿಸಿದ್ದಾರೆ.
Advertisement
ಐದಾರು ಯುವಕರಲ್ಲಿ ಒಬ್ಬ ಯುವಕ ಉದ್ದೇಶಪೂರ್ವಕವಾಗಿ ಯುವತಿಯನ್ನು ಹಿಡಿದು ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರೇಮಿಗಳು ನಾವು ಈ ತಪ್ಪನ್ನು ಮತ್ತೇ ಮಾಡುವುದಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರೇಮಿಗಳು ಮನವಿ ಮಾಡಿಕೊಂಡರೂ ಅವರ ಮಾತನ್ನು ಕೇಳದೆ ಅವರ ಮೇಲೆ ನಿರಂತರವಾಗಿ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಸದ್ಯ ಪೊಲೀಸರು ಇದುವರೆಗೂ ಆ ಯುವಕರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.