ಮಂಡ್ಯ: ಕಂಪನದಿಂದಾಗಿ ಬಿರುಕು ಬಿಟ್ಟಿದ್ದ ಮನೆ ಗೋಡೆ ಕುಸಿದು ದಂಪತಿ ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಣಗಹಳ್ಳಿಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಪುಟ್ಟಸ್ವಾಮಿ ಮತ್ತು ಶೋಭಾ ಎಂಬುವರು ಗಾಯಗೊಂಡಿದ್ದಾರೆ.
Advertisement
ಕೆಲವು ತಿಂಗಳ ಹಿಂದೆ ಕಂಪನವಾಗಿ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದ್ರೆ ಆರ್ಥಿಕ ಸಮಸ್ಯೆಯಿಂದ ದಂಪತಿ ಮನೆಯ ದುರಸ್ತಿ ಮಾಡಿಸಿರಲಿಲ್ಲ. ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಮನೆಯ ಗೋಡೆ ಕುಸಿದಿದೆ.
Advertisement
ಸದ್ಯ ಗಾಯಾಳುಗಳಿಗೆ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.