ಕೋಲಾರ: ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದ ದಂಪತಿ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಬಂಗಾರಪೇಟೆ ಮೂಲದ ಪ್ರಮೀಳ (48) ಹಾಗೂ ರಾಮು (55) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೀನಿಯಲ್ಲಿಂದು ಮುಂಜಾನೆ ಈ ಘಟನೆ ಸಂಭವಿಸಿದೆ.
Advertisement
ಡಯಾಬಿಟೀಸ್ ಕಾಯಿಲೆಯಿಂದ ನರಳುತ್ತಿದ್ದ ಪ್ರಮೀಳ ಅವರ ಒಂದು ಕಾಲನ್ನು ತೆಗೆದಿದ್ದ ವೈದ್ಯರು ಡಯಾಲಸಿಸ್ ಮಾಡುವಂತೆ ತಿಳಸಿದ್ದರು. ಮಾತ್ರವಲ್ಲದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಮು ದಂಪತಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು.
Advertisement
Advertisement
ಬಡತನ, ತೀವ್ರ ಅನಾರೋಗ್ಯ, ಅಸಾಹಯಕತೆಯಿಂದ ನೊಂದಿದ್ದ ಮೂಲತಃ ಬಂಗಾರಪೇಟೆ ಮೂಲದ ದಂಪತಿ ಮುಳಬಾಗಿಲು ಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ ಮೆಡಿಕಲ್ ಶಾಪ್‍ಗೆ ತೆರಳಿ ಸೈನೈಡ್ ತೆಗೆದುಕೊಂಡಿರುವ ದಂಪತಿ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಈ ವಿಷಯ ತಿಳಿದ ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.