ಬೊಗೊಟಾ: ಕೆಲವರು ಎಷ್ಟು ದುಡ್ಡಿದ್ದರೂ ಎಷ್ಟೇ ದೊಡ್ಡ ಮನೆಯಿದ್ದರೂ ಮತ್ತಷ್ಟು ಶ್ರೀಮಂತಿಕೆಗೆ ಹಂಬಲಿಸುತ್ತಾರೆ. ಮತ್ತೂ ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನೋ ಮಾತಿನಂತೆ ಇದ್ದದ್ದರಲ್ಲೇ ನೆಮ್ಮದಿಯಾಗಿರ್ತಾರೆ. ಇದಕ್ಕೆ ಉದಹರಣೆ ದಕ್ಷಿಣ ಅಮೆರಿಕದ ಕೊಲೊಂಬಿಯಾದ ಈ ದಂಪತಿ. ಹಲವಾರು ವರ್ಷಗಳಿಂದ ಇವರು ಒಳಚಂಡಿಯೊಂದರಲ್ಲೇ ಸಂಸಾರ ನಡೆಸುತ್ತಿದ್ದಾರೆ. ಶ್ರೀಮಂತಿಕೆ ವೈಭೋಗಗಳು ಇಲ್ಲದಿದ್ದರೂ ಸಂತೋಷವಾಗಿದ್ದಾರೆ.
Advertisement
ಮರಿಯಾ ಗಾರ್ಸಿಯಾ ಮತ್ತು ಮೈಗುಯೆಲ್ ರೆಸ್ಟ್ರೆಪೋ ದಂಪತಿ 22 ವರ್ಷಗಳಿಂದ ಒಳಚಂಡಿಯಲ್ಲೇ ಸಂಸಾರ ಮಾಡುತ್ತಿದ್ದಾರೆ ಅಂದ್ರೆ ನಂಬಲೇಬೇಕು. ಈ ದಂಪತಿ ಮೊದಲು ಕೊಲೊಂಬಿಯಾದ ಮೆಡೆಲಿನ್‍ನಲ್ಲಿ ಭೇಟಿಯಾದಾಗ ಇಬ್ಬರೂ ಮಾದಕ ವ್ಯಸನಿಗಳಗಿದ್ದರು. ಈ ಪ್ರದೇಶ ಹೆಚ್ಚು ಹಿಂಸಾಚಾರ ಹಾಗೂ ಮಾದಕದ್ರವ್ಯಗಳ ಕಳ್ಳಸಾಗಣೆಯ ಕೇಂದ್ರವಾಗಿತ್ತು. ಬೀದಿಯಲ್ಲೇ ಬದುಕು ಸಾಗಿಸುತ್ತಿದ್ದ ಇವರ ಜೀವನವನ್ನು ಮಾದಕ ವ್ಯಸನ ಹಾಳು ಮಾಡಿತ್ತು. ಆದ್ರೆ ಈ ಇಬ್ಬರೂ ಪರಸ್ಪರ ಜೊತೆಯಾಗಿದ್ದು ಸಂತೋಷ ಕಂಡುಕೊಂಡಿದ್ದರು. ಹೀಗಾಗಿ ಮಾದಕ ವ್ಯಸನದಿಂದ ಮುಕ್ತರಾಗಬೇಕು ಅಂತ ತೀರ್ಮಾನಿಸಿದ್ದರು.
Advertisement
Advertisement
ಹಣ ಮತ್ತು ಆಶ್ರಯ ನೀಡಲು ಇಬ್ಬರಿಗೂ ಕುಟುಂಬಸ್ಥರು ಹಾಗೂ ಸ್ನೇಹಿತರಿಲ್ಲದ ಕಾರಣ ಈ ಒಳಚರಂಡಿಯನ್ನೇ ಮನೆಯಾಗಿಸಿಕೊಂಡರು. ಒಳಚರಂಡಿಯಲ್ಲಿ ವಾಸ ಮಾಡೋದನ್ನ ಊಹೆ ಮಾಡಿಕೊಂಡರೆ ನಮ್ಮ ಕಣ್ಣಮುಂದೆ ಬರೋದು ಕೇವಲ ಗಲೀಜು ಹಾಗೂ ಧೂಳಿನ ಚಿತ್ರಣ. ಆದ್ರೆ ಅದಕ್ಕೆ ವಿರುದ್ಧವೆಂಬಂತೆ ಈ ದಂಪತಿ ಒಳಚರಂಡಿಯಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಚೊಕ್ಕವಾದ ಮನೆ ಮಾಡಿಕೊಂಡಿದ್ದಾರೆ. ಇದರೊಳಗೆ ಟಿವಿ, ಟೇಬಲ್ ಫ್ಯಾನ್ ಹಾಗೂ ವಿದ್ಯುತ್ ಸಂಪರ್ಕವೂ ಇದೆ. ಅಲ್ಲದೆ ಹಬ್ಬದ ಸಂದರ್ಭದಲ್ಲಿ ಇವರು ಎಲ್ಲರಂತೆ ಮನೆಯನ್ನ ಸಿಂಗರಿಸ್ತಾರೆ.
Advertisement
ದಂಪತಿಯ ಜೊತೆ ಬ್ಲಾಕಿ ಎಂಬ ನಾಯಿ ಕೂಡ ಇದ್ದು ಮಾಲೀಕರು ಇಲ್ಲದಿದ್ದಾಗ ಮನೆಯನ್ನು ಕಾಯುತ್ತದೆ.