ಹುಬ್ಬಳ್ಳಿ: 10 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಗೆ ಆತಂಕಗಳು ಎದುರಾಗಿದೆ. ಇಬ್ಬರ ಪ್ರೀತಿಯನ್ನು ಒಪ್ಪದ ಹೆತ್ತವರು ಹಾಕಿದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಆದರೂ ಅವರನ್ನು ಬದುಕಲು ಬಿಡದೆ ಯುವತಿ ಮನೆಯವರು ಯುವಕನಿಗೆ ಪ್ರಾಣ ಬೆದರಿಕೆ ಹಾಕಿ, ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಇದೀಗ ಪ್ರೇಮಿಗಳು ಕಂಗಾಲಾಗಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಾತಿ ಅಡ್ಡವಾಗಿ ಯುವಜೋಡಿಗಳು ಮನೆ ಬಿಟ್ಟು ಬಂದು ಸಪ್ತಪದಿ ತುಳಿದಿದ್ದಾರೆ. ಪವನ್ ಮತ್ತು ಪಾವನಿ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದು, ಈಗ ಯುವತಿ ಮನೆಯವರ ಜಾತಿ ವಿರೋಧದಿಂದ ಸೂರು ಬಿಟ್ಟು ಬಂದಿದ್ದಾರೆ.
Advertisement
Advertisement
ಮೊದಲು ಇಬ್ಬರು ಪ್ರೀತಿ ಮಾಡುತ್ತಿದ್ದ ವಿಷಯ ಮನೆಯವರಿಗೆ ಗೊತ್ತಿದ್ದರೂ ಕೂಡ ಯಾವುದೇ ತಕರಾರು ಮಾಡದೇ ಸುಮ್ಮನಿದ್ದರು. ಆದರೆ ಪವನ್ ಮತ್ತು ಪಾವನಿ ನಡುವೆ ಪ್ರೀತಿ ಅಗಾಧವಾಗಿ ಬೆಳೆದಾಗ ಯುವತಿ ಕುಟುಂಬಸ್ಥರು ಜಾತಿ ವಿಚಾರವಾಗಿ ತಕರಾರು ಮಾಡಿ ಇಬ್ಬರನ್ನು ಬೇರೆ ಮಾಡಲು ಯತ್ನಿಸಿದ್ದಾರೆ. ಅದು ಆಗದ ಮಾತು ಎಂದು ತಿಳಿದ ಮನೆಯವರು ಶಿಕ್ಷಣ ಮುಗಿಸಿ ಬಳಿಕ ಈ ಬಗ್ಗೆ ವಿಚಾರ ಮಾಡುವುದಾಗಿ ಹೇಳಿದ್ದಾರೆ.
Advertisement
ಹೆತ್ತವರ ಮಾತಿಗೆ ಬೆಲೆ ಕೊಟ್ಟು ಪಾವನಿ ಎಂ.ಕಾಂ ಮುಗಿಸಿದರೆ, ಪವನ್ ಕೂಡ ತನ್ನ ಎಂಜಿನಿಯರಿಂಗ್ ಮುಗಿಸಿದ್ದನು. ಅದಾದ ಬಳಿಕವೂ ಮನೆಯವರು ಕೆಲಸ ಹುಡುಕಿಕೊಳ್ಳಿ ಆಮೇಲೆ ಮದುವೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಪವನ್ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದರೂ ಕೂಡ ಮತ್ತೆ ಜಾತಿ ವಿಷಯ ಅಡ್ಡ ತಂದು ಇಬ್ಬರನ್ನು ಬೇರೆ ಮಾಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಈ ಪ್ರೇಮಿಗಳು ಹೆದರಿದ್ದಕ್ಕೆ ಯುವತಿ ಮನೆಯವರು ಪವನ್‍ನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
Advertisement
ಭಯದಿಂದ ಇಬ್ಬರೂ ಸ್ವಲ್ಪ ದಿನ ದೂರವಾದರೂ ಮತ್ತೆ ಬಿಟ್ಟಿರಲಾರದೆ ಮತ್ತೆ ಸಂಪರ್ಕ ಹೊಂದಿದ್ದಾರೆ. ಇದನ್ನು ತಿಳಿದ ಯುವತಿ ಮನೆಯವರು ಪಾವನಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಆಗ ಪವನ್ ಮತ್ತು ಪಾವನಿ ಮನೆ ಬಿಟ್ಟು ಓಡಿ ಹೋಗಿ ಬಳ್ಳಾರಿಯ ಸಂಡೂರಿನ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಆದರೆ ಪಾವನಿ ಮನೆಯವರು ಮಾತ್ರ ಇವರಿಬ್ಬರನ್ನು ಬದುಕಲು ಬಿಡುತ್ತಿಲ್ಲ.
ಪವನ್ ಪಾವನಿಯನ್ನು ಕಿಡ್ನಾಪ್ ಮಾಡಿದ್ದಾನೆ ಅಂತ ಸುಳ್ಳು ಕೇಸ್ ದಾಖಲಿಸಿ ಪವನ್ ಮೇಲೆ ಜೀವ ಬೆದರಿಕೆ ಹಾಕಿದ್ದಾರಂತೆ. ಇದರಿಂದ ನಾವೂ ಹೇಗಾದರು ಬದಕುತ್ತೆವೆ ನಮ್ಮನ್ನು ಬದುಕಲು ಬಿಡಿ ಎಂದು ನವಜೋಡಿ ಅಂಗಲಾಚಿ ಕೇಳಿಕೊಳ್ಳುತ್ತಿದ್ದಾರೆ. ಕೇವಲ ಜಾತಿ ಬೇರೆ ಎನ್ನುವ ಉದ್ದೇಶಕ್ಕೆ ಪಾವನಿ ಮನೆಯವರು ಇವರ ಪ್ರೀತಿಯನ್ನು ಒಪ್ಪುತ್ತಿಲ್ಲ. ಆದರೆ ಪವನ್ ಜೊತೆಗೆ ನಾನು ಚೆನ್ನಾಗಿ ಬಾಳಿ ಬದುಕಿ ತೋರಿಸುವೆ ಎಂದು ಪಾವನಿ ಹೇಳುತ್ತಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews