ಲಂಡನ್: ಮನೆಯನ್ನು ನವೀಕರಿಸುವಾಗ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಅಪಾರ ಮೊತ್ತದ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.
ಇಂಗ್ಲೆಂಡ್‍ನ ಉತ್ತರ ಯಾರ್ಕ್‍ಷೈರ್‌ನಲ್ಲಿ ನೆಲೆಸಿರುವ ದಂಪತಿ ಮನೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆ ದಂಪತಿ ಕಳೆದ 10 ವರ್ಷಗಳಿಂದ ಆ ಮನೆಯಲ್ಲಿ ನೆಲೆಸಿದ್ದರು. ಮನೆ ತುಂಬಾ ಹಳೆಯದಾಗಿದೆ ಎಂದು ನವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಒಂದು ಲೋಹದ ಡಬ್ಬಿ ದೊರಕಿದೆ. ಅದನ್ನು ತೆರೆದಾಗ ಅವರಿಗೆ ಆಶ್ಚರ್ಯವೊಂದು ಕಾದಿದ್ದು, ಬರೋಬ್ಬರಿ 264 ಚಿನ್ನದ ನಾಣ್ಯಗಳು ಪತ್ತೆ ಆಗಿವೆ.
Advertisement
Advertisement
ಈ ಬಗ್ಗೆ ಚಿನ್ನದ ನಾಣ್ಯ ಸಿಕ್ಕಿರುವ ದಂಪತಿ ಮಾತನಾಡಿ, ಈ ಎಲ್ಲಾ ನಾಣ್ಯಗಳು ಕಾಂಕ್ರೀಟ್ ಅಡಿಯಲ್ಲಿ ಕೇವಲ 6 ಇಂಚುಗಳಷ್ಟಿರುವ ಲೋಹದ ಡಬ್ಬಿಯಲ್ಲಿ ಪತ್ತೆಯಾಗಿವೆ. ಈ ಪ್ರಾಚೀನ ನಾಣ್ಯಗಳನ್ನು ಹರಾಜು ಮಾಡಿದ್ದೇವೆ. 250,000 ಫೌಂಡ್‍ಗಳಿಗೆ(2.3ಕೋಟಿ ರೂ.) ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ
Advertisement
Advertisement
ಈ ಎಲ್ಲಾ ಚಿನ್ನದ ನಾಣ್ಯವು 400 ವರ್ಷಕ್ಕಿಂತಲೂ ಹಳೆಯದ್ದಾಗಿದ್ದು, 1610 ರಿಂದ 1726ರ ಆಡಳಿತದಲ್ಲಿದ್ದ ಚಿನ್ನದ ನಾಣ್ಯಗಳಾಗಿವೆ. ಜೊತೆಗೆ ಈ ಎಲ್ಲಾ ನಾಣ್ಯಗಳನ್ನು ಜೇಮ್ಸ್ 1 ಮತ್ತು ಚಾರ್ಲ್ಸ್ 1ರ ಆಳ್ವಿಕೆಯಲ್ಲಿ ತಯಾರಿಸಲ್ಪಟ್ಟಿದ್ದವು ಎನ್ನಲಾಗುತ್ತಿದೆ. ಈ ಎಲ್ಲಾ ನಾಣ್ಯಗಳು ಪ್ರಭಾವಿ ವ್ಯಾಪಾರಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ