ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿಯನ್ನು ಕೊಲೆ ಮಾಡಿ ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಹೊರವಲಯದ ಬಿ.ಕಾಟೀಹಳ್ಳಿಯಲ್ಲಿ ನಡೆದಿದೆ.
ಶಿಲ್ಪಾ (30) ಮೃತ ದುರ್ದೈವಿ. ಪತ್ನಿಯನ್ನು ಕೊಲೆ ಮಾಡಿ ಜ್ಞಾನೇಶ್(38) ಆತ್ಮಹತ್ಯೆಗೆ ಶರಣಾದ ಪತಿ. ಜ್ಞಾನೇಶ್ ಮತ್ತು ಶಿಲ್ಪಾ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ. ಇತ್ತ ಪತಿ ಜ್ಞಾನೇಶ್ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದನು. ಇದರಿಂದ ಶಿಲ್ಪಾ ಬೇಸತ್ತಿದ್ದರು.
ಸೋಮವಾರವು ಕೂಡ ಕುಡಿತದ ವಿಚಾರಕ್ಕೆ ಪತ್ನಿ ಮತ್ತು ಪತಿಯ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಪತಿ ಜ್ಞಾನೇಶ್ ಶಿಲ್ಪಾಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನು ಅಲ್ಲೆ ಮನೆಯ ಕಿಟಕಿ ಸರಳುಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮವಾರ ಬೆಳಗ್ಗೆಯೇ ಈ ಘಟನೆ ನಡೆದಿದ್ದು, ಸಂಜೆ ಪಕ್ಕದ ಮನೆಯವರು ಇದುವರೆಗೂ ಯಾರು ಮನೆಯಿಂದ ಹೊರಗಡೆ ಬಂದಿಲ್ಲ ಎಂದು ಮಾತನಾಡಿಸಲು ಹೋಗಿದ್ದಾರೆ. ಆದರೆ ಬಾಗಿಲನ್ನು ತೆರೆಯಲಿಲ್ಲ. ಬಳಿಕ ಕಿಟಿಯ ಮೂಲಕ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ.
ಮಾಹಿತಿ ತಿಳಿದ ಬಡಾವಣೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv