ಬಾಗಲಕೋಟೆ: ಸಾಲಭಾದೆ ತಾಳಲಾರದೇ ದಂಪತಿ (Couple) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಜರುಗಿದೆ.
ಮೃತರನ್ನ ಮಲ್ಲಪ್ಪ ಲಾಳಿ(56), ಮಹಾದೇವಿ(51) ಆತ್ಮಹತ್ಯೆಗೆ ಶರಣಾದ ದಂಪತಿಗಳು. ಘಟಪ್ರಭಾ ನದಿಗೆ (Ghataprabha River) ಅಡ್ಡಲಾಗಿ ನಿರ್ಮಿಸಿರುವ ಯಾದಬಾಡ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement
Advertisement
ದಂಪತಿ ಒಂದು ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಈ ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮಕ್ಕಳ ಮದುವೆಗಾಗಿ ದಂಪತಿ ಅಲ್ಲಲ್ಲಿ ಸಾಲ ಮಾಡಿದ್ದರು. ಸಾಲ ನೀಡಿದವರ ಕಿರುಕುಳ ತಾಳಲಾರದೇ ದಂಪತಿ ಬುಧವಾರ ರಾತ್ರಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್ ಅಲಿಗೆ ಹೇಳಿದ್ದೇನು?
Advertisement
ಡೆತ್ ನೋಟ್ ಮುಧೋಳ ಪೊಲೀಸರ ಕೈ ಸೇದಿದೆ. ಇದರಲ್ಲಿ ಸಾಲ ಕೊಟ್ಟು ಕಿರುಕುಳ ನೀಡಿದವರ ಹೆಸರುಗಳ ಮಾಹಿತಿ ನೀಡಿದ್ದಾರೆ. ಕೊನೆಗೆ ಮಕ್ಕಳಿಗೆ “ನಮ್ಮನ್ನು ಕ್ಷಮಿಸಿ” ಎಂದು ಬರೆದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮುಧೋಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.
Advertisement