ಹೈದರಾಬಾದ್: ಯುವ ಜೋಡಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟು, ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಗುಂಟುಪಲ್ಲಿಯ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.
ಶ್ರೀಧಾರಿಣಿ ಮೃತಪಟ್ಟ ಯುವತಿ. ನವೀನ್ ಗಂಭೀರವಾಗಿ ಗಾಯಗೊಂಡ ಯುವಕ. ನವೀನ್ ಮೂಲತಃ ಬೀಮಿಲಿ ಮಂಡಲ್‍ನವನಾಗಿದ್ದು, ಧಾರಿಣಿ ಉಂಗುತುರ್ ಮಂಡಲ್‍ನ ಎಂಎಂ ಪುರಂದವಳು. ಭಾನುವಾರ ಬೆಳಗ್ಗೆ 11.30ಕ್ಕೆ ನವೀನ್ ಹಾಗೂ ಧಾರಿಣಿ ಬುದ್ಧ ಸ್ಮಾರಕ ನೋಡಲು ಬೈಕಿನಲ್ಲಿ ತೆರಳಿದ್ದರು.
Advertisement
ಸ್ಥಳೀಯರ ಹಾಗೂ ಪೊಲೀಸರ ಮಾಹಿತಿ ಪ್ರಕಾರ ಕಾಮವರ್ಪುಕೋಟ ಬಳಿಯಿರುವ ಬೌದ್ಧ ಅರಮಲ ಗುಹೆಯಲ್ಲಿ ಭಾನುವಾರ ಹೆಚ್ಚು ಮಂದಿ ಆಗಮಿಸುತ್ತಾರೆ. ಹಾಗಾಗಿ ಆ ಜಾಗದಲ್ಲಿರುವ ನಿರ್ಜನ ಪ್ರದೇಶಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಸತೀಶ್ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ನಿನ್ನೆ ಮಧ್ಯಾಹ್ನ ಸುಮಾರು 2.45ಕ್ಕೆ ಪರಿಶೀಲನೆ ನಡೆಸಿದ್ದಾಗ ಗುಹೆ ಬಳಿ ಜೋಡಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.
Advertisement
Advertisement
ಸತೀಶ್ ಆ ಜೋಡಿಯನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಯುವತಿ ಮೃತಪಟ್ಟಿದ್ದಳು. ಸಿಂತಾಲಾಪುಡಿಯ ಸರ್ಕಲ್ ಇನ್ಸ್ ಪೆಕ್ಟರ್ ವಿಲ್ಸನ್ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರ ಸಹಾಯದಿಂದ ಎಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಡಿಎಸ್‍ಪಿ ಸಿ.ಎಚ್ ಮುರಳಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸುವಾಗ ಧಾರಿಣಿ ತಲೆಯ ಹಿಂಭಾಗದಲ್ಲಿ ಗಂಭೀರ ಪ್ರಮಾಣದ ಏಟು ಬಿದ್ದಿದೆ. ಧಾರಿಣಿಯ ಮೃತದೇಹದ ಬಳಿ ಕಳ್ಳತನಕ್ಕೆ ಉಪಯೋಗಿಸುವ ಶಸ್ತ್ರಗಳಿಂದ ಜೋಡಿಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಯುವತಿಯ ಉಡುಪು ಅಸ್ತವ್ಯಸ್ತ ಆಗಿರುವುದನ್ನು ಕಂಡು ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿರಬಹುದು ಎನ್ನುವ ಶಂಕೆ ಕೇಳಿಬಂದಿದೆ.
ಶ್ರೀ ಧಾರಿಣಿ ಪೋಲಾಸನಿಪಲ್ಲಿಯ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಎಸ್‍ಸಿ ಓದುತ್ತಿದ್ದರೆ, ನವೀನ್ ಬಿಕಾಂ ಮೊದಲನೇ ವರ್ಷ ಅರ್ಧಕ್ಕೆ ನಿಲ್ಲಿಸಿ ತಂದೆಗೆ ಪೈಟಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv