ನವದೆಹಲಿ: ಫೇಸ್‍ಬುಕ್ ಮೂಲಕ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದ ದಂಪತಿ ದರೋಡೆಗಿಳಿದಿದ್ದು, ಇದೀಗ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಲಿಘಢ ಮುಸ್ಲಿಮ್ ಯುನಿವರ್ಸಿಟಿ ವಿದ್ಯಾರ್ಥಿನಿ ಹುದಾ ಹಾಗೂ ಜುಬೇರ್ ಬಂಧಿತ ಆರೋಪಿಗಳು. ಈ ದಂಪತಿ ನ್ಯೂ ಫ್ರೆಂಡ್ಸ್ ಕಾಲೋನಿನಲ್ಲಿ ಮಕ್ಕಳಿಗೆ ಗನ್ ಪಾಯಿಂಟ್ ಹಿಡಿದು 35 ವರ್ಷದ ಮಹಿಳೆಯನ್ನು ಬೆದರಿಸಿ ಆಕೆಯ ಬಳಿ ದರೋಡೆ ಮಾಡಿದ್ದರು. ಕಳೆದ ವಾರ ದೆಹಲಿ ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಾಲಕನೊಬ್ಬನನ್ನೂ ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ.
Advertisement
Advertisement
ಫೇಸ್‍ಬುಕ್ ಪ್ರೀತಿ:
ಹುದಾ ಅಲಿಘಢ ಮುಸ್ಲಿಮ್ ಯುನಿವರ್ಸಿಟಿ ಅಧ್ಯಯನ ಮಾಡುತ್ತಿದ್ದಳು. ಫೇಸ್‍ಬುಕ್ ಮೂಲಕ 2015 ರಲ್ಲಿ ಜುಬೇರ್ ಪರಿಚಯವಾಗಿದ್ದು, ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಎರಡು ಕುಟುಂಬದವರು ಇವರಿಬ್ಬರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಕೊನೆಗೆ ಅವರ ವಿರೋಧದ ನಡುವೆಯೂ ಇಬ್ಬರು ಮದುವೆಯಾಗಿದ್ದರು. ಆದರೆ ಹುದಾ ಈ ಅಪರಾಧ ಮಾಡಲು ಏಕೆ ಮುಂದಾದಳು ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಡಿಸಿಪಿ ಚಿನ್ಮಾಯ್ ಬಿಸ್ವಾಲ್ ತಿಳಿಸಿದ್ದಾರೆ.
Advertisement
ಜುಬೇರ್ ಮತ್ತು ಅವನ ತಂಡದವರು ಮಾರ್ಚ್ 5ರಂದು ಮಹಿಳೆ ಬ್ಯಾಂಕಿನಿಂದ 1 ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಿ ಬರುತ್ತಿದ್ದಾಗ ದರೋಡೆ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
Advertisement
ಜಮಿಯಾ ನಗರದ ಮನೆಯೊಂದರಲ್ಲಿ ಜುಬೇರ್ ನನ್ನು ಹಾಗೂ ಚಟ್ಟಾರ್ಪುರದಲ್ಲಿ ಹುದಾಳನ್ನು ಬಂಧಿಸಲಾಗಿದೆ. ಅಲಿಗಢ್ ಮತ್ತು ದೆಹಲಿಯಲ್ಲಿ ಇವರಿಬ್ಬರ ಮೇಲೆ 24 ಪ್ರಕರಣಗಳಿವೆ. ಕಳೆದ ವರ್ಷದಲ್ಲಿ ಜುಬೇರ್ ಎರಡು ಬಾರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದನು ಎಂದು ವರದಿಯಾಗಿದೆ.