ಮಡಿಕೇರಿ: ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ನಡೆದಿದೆ.
ಯುವರಾಜ್ (25) ಮತ್ತು ಪತ್ನಿ ಶಿಲ್ಪಾ (22) ಮೃತ ದಂಪತಿ. ಯುವರಾಜ್ ಅವರು ವನ್ಯಜೀವಿ ವಿಭಾಗದ ವ್ಯಾಪ್ತಿಯ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಶಿವಮೊಗ್ಗ ಮೂಲದ ಇವರು ಕಳೆದ 10 ತಿಂಗಳ ಹಿಂದೆ ಮದುವೆಯಾಗಿದ್ದರು. ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಕರ್ತವ್ಯ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ವೇಲ್‌ನಿಂದ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮನೆ ಮಾಲೀಕ ಸತ್ಯ ಅವರನ್ನು ಕರೆದು ಮೃತದೇಹವನ್ನು ಇಬ್ಬರು ಸೇರಿ ಇಳಿಸಿದ್ದಾರೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ
Advertisement
ಈ ಸಂದರ್ಭ ಸಂಬಂಧಿಕರಿಗೆ ದೂರವಾಣಿ ಕರೆಮಾಡಿ ವಿಷಯವನ್ನು ಯುವರಾಜ್ ತಿಳಿಸಿದ್ದಾನೆ. ಸ್ವಲ್ಪ ದೂರಲ್ಲೇ ಯುವರಾಜ್ ಸಹ ಬಾತ್ ರೂಮ್‌ಗೆ ಹೋಗಿ ಪತ್ನಿ ನೇಣು ಬಿಗಿದು ಕೊಂಡಿದ್ದ ವೇಲ್‌ನಿಂದ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೊಡಗು ವನ್ಯಜೀವಿ ಎ.ಸಿ.ಎಫ್. ದಯಾನಂದ್, ಶ್ರೀಮಂಗಲ ಆರ್‌ಎಫ್‌ಓ ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ