ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‍ನ ಫ್ರಿಸ್ಕೋ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ.
ಗವಿನಿ ರಾಜು(41), ದಿವ್ಯಾ ಅವುಲಾ(34) ಹಾಗೂ ಪ್ರೇಮ್‍ನಾಥ್ ರಾಮನಾಥ್(42) ಮೃತ ದುರ್ದೈವಿಗಳು. ಮೂಲತಃ ಆಂಧ್ರಪ್ರದೇಶದ ಹೈದರಾಬಾದ್‍ನ ದಂಪತಿ ಹಾಗೂ ಗುಂಟೂರು ಮೂಲದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಜು ಹಾಗೂ ದಿವ್ಯಾಗೆ ಏಳು ವರ್ಷದ ಮಗಳು ಕೂಡ ಇದ್ದಾಳೆ.
Advertisement
2007ರಲ್ಲಿ ರಾಜು ಹಾಗೂ ದಿವ್ಯಾ ಮದುವೆ ಆಗಿತ್ತು. ಮದುವೆಯಾದ ನಂತರ ದಿವ್ಯಾ ತನ್ನ ಪತಿ ಜೊತೆ ಅಮೆರಿಕಗೆ ತೆರಳಿ ಅಲ್ಲಿಯೇ ಕೆಲಸಕ್ಕೆ ಸೇರಿದ್ದಳು. ಮೊದಲು ಟೆಕ್ಸಾಸ್‍ನಲ್ಲಿ ವಾಸಿಸುತ್ತಿದ್ದ ದಂಪತಿ ಬಳಿಕ ಡಲ್ಲಾಸ್‍ಗೆ ಶಿಫ್ಟ್ ಆದರು. ಡಲ್ಲಾಸ್‍ನಲ್ಲಿ ತಮ್ಮ ಸ್ನೇಹಿತ ಪ್ರೇಮ್‍ನಾಥ್ ಜೊತೆ ವಾಸಿಸುತ್ತಿದ್ದರು. ರಾಜು ವೆಲ್ಸ್ ಫಾರ್ಗೊ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದನು. ಇತ್ತ ಪತ್ನಿ ದಿವ್ಯಾ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.
Advertisement
Advertisement
ಕಳೆದ ಕೆಲವು ದಿನಗಳಿಂದ ರಾಜು ಹಾಗೂ ದಿವ್ಯ ಡಲ್ಲಾಸ್‍ನ ಫ್ರಿಸ್ಕೋ ನಗರದಲ್ಲಿ ತಮ್ಮದೇ ಆದ ಮನೆ ಕಟ್ಟಿಸುತ್ತಿದ್ದರು. ಭಾನುವಾರ ದಂಪತಿ ತಮ್ಮ 7 ವರ್ಷದ ಮಗಳು ರಿಯಾಳನ್ನು ಡ್ಯಾನ್ಸ್ ಕ್ಲಾಸ್‍ಗೆ ಬಿಟ್ಟು ಪ್ರೇಮ್‍ನಾಥ್ ಜೊತೆ ಮನೆ ಕಟ್ಟಿಸುತ್ತಿದ್ದ ಜಾಗಕ್ಕೆ ಹೋಗಿದ್ದರು. ಮನೆ ಕಟ್ಟಿಸುತ್ತಿದ್ದ ಸ್ಥಳಕ್ಕೆ ಹೋಗಿ ಹಿಂದಿರುಗುವಾಗ ಕಾರು ಚಲಾಯಿಸುತ್ತಿದ್ದ ದಿಯಾ ಸ್ಕೂಲ್ ಝೋನ್ ಇರುವುದನ್ನು ನೋಡಿ ಕಾರಿನ ವೇಗವನ್ನು ಕಡಿಮೆ ಮಾಡಿದ್ದು, ಇದೇ ವೇಳೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
Advertisement
ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಫ್ರಿಸ್ಕೋ ಪೊಲೀಸರು ಪ್ರತಿಕ್ರಿಯಿಸಿ, ಅಪ್ರಾಪ್ತ ಬಾಲಕ ಕಾರು ಚಲಾಯಿಸುತ್ತಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಅಪಘಾತದ ವಿಷಯವನ್ನು ರಾಜು ಸ್ನೇಹಿತರು ಹೈದರಾಬಾದ್‍ನಲ್ಲಿರುವ ಆತನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಅಮೆರಿಕದ ಕೊಲಂಬಸ್‍ನಲ್ಲಿರುವ ದಿವ್ಯಾ ಸಹೋದರಿ ದೀಪ್ತಿ ತನ್ನ ಪತಿಯ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಹುಟ್ಟುಹಬ್ಬದ ದಿನವೇ ದಿವ್ಯಾ ಮೃತಪಟ್ಟಿದ್ದು, ಆಕೆಯ 7 ವರ್ಷದ ಮಗಳು ರಿಯಾ, ದೀಪ್ತಿ ಜೊತೆ ವಾಸಿಸುತ್ತಿದ್ದಾಳೆ. ರಾಜುವಿನ ಸ್ನೇಹಿತರು ತಾನಾ ಅಸೋಸಿಯೇಶನ್ ಜೊತೆ ಸೇರಿ ಶುಕ್ರವಾರ ಮೂವರ ಮೃತದೇಹವನ್ನು ಹೈದರಾಬಾದ್‍ಗೆ ಕಳುಹಿಸಿಕೊಡಲಿದ್ದಾರೆ.