ಮುಂಬೈ: ಯುವ ಜೋಡಿಯೊಂದು ಬ್ಯುಸಿ ರಸ್ತೆಯ ಡಿವೈಡರ್ ನಲ್ಲೇ ಸೆಕ್ಸ್ ಮಾಡಿದ ಘಟನೆ ಮುಂಬೈನಲ್ಲಿರುವ ಮರೈನ್ ಡ್ರೈವ್‍ನ ನಾರಿಮನ್ ಪಾಯಿಂಟ್‍ನಲ್ಲಿ ನಡೆದಿದೆ.
ಏರ್ ಇಂಡಿಯಾ ಬಿಲ್ಡಿಂಗ್ ಹಾಗೂ ಮರೈನ್ ಹೋಟೆಲ್ ಪ್ಲಾಜಾದ ನಡುವೆ ಇರುವ ಮರೈನ್ ಡ್ರೈವ್‍ನ ಜನಸಂದಣಿಯಲ್ಲಿರುವ ರಸ್ತೆಯಲ್ಲಿ ಜೋಡಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದರು. ಆದರೆ ಅಲ್ಲಿದ್ದ ಸಾರ್ವಜನಿಕರು ಜೋಡಿಯನ್ನು ನೋಡುತ್ತಾ ಮೊಬೈಲಿನಲ್ಲಿ ಫೋಟೋ, ವಿಡಿಯೋವನ್ನು ತೆಗೆದುಕೊಂಡಿದ್ದಾರೆ.
Advertisement
ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ವಿಡಿಯೋ ತೆಗೆಯುತ್ತಿದ್ದಾಗ ಅಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಆ ಘಟನಾ ಸ್ಥಳಕ್ಕೆ ತಲುಪಿದ್ದಾರೆ.
Advertisement
Advertisement
ಪೊಲೀಸರನ್ನು ನೋಡಿದ ತಕ್ಷಣ ಆ ಯುವ ಜೋಡಿ ಒಂದು ಕ್ಷಣ ದಂಗಾಗಿ ಹೋದರು. ನಂತರ ತಮ್ಮ ಬಟ್ಟೆಯನ್ನು ಸರಿಪಡಿಸಿಕೊಂಡು ಟ್ರಾಫಿಕ್ ಇರುವ ರಸ್ತೆಯನ್ನು ದಾಟಿ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಕೂಡಲೇ ಪೊಲೀಸರು ಓಡಿ ಹೋಗುತ್ತಿದ್ದ ಯುವತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯುವಕ ಮಾತ್ರ ಪರಾರಿಯಾಗಿದ್ದಾನೆ. ಮೂಲಗಳ ಪ್ರಕಾರ ಯುವಕ ವಿದೇಶಿ ಪ್ರಜೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ.
Advertisement
ಪೊಲೀಸರು ಯುವತಿಯನ್ನು ಪ್ರಶ್ನಿಸಿದ್ದಾಗ ಆಗ ಆಕೆ, “ನಾನು ಗೋವಾ ಮೂಲದವಳು. ನಂತರ ಪೊಲೀಸರೊಂದಿಗೆ ವಾಗ್ವಾದ ನಡೆಸಿ ನಾವು ಜಸ್ಟ್ ಕಿಸ್ ಮಾಡುತ್ತಿದ್ದೇವು ಎಂದು ಯುವತಿ ಹೇಳಿದ್ದಾಳೆ. ಪೊಲೀಸರ ಪ್ರಕಾರ ಯುವತಿ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯನ್ನು ಚೇಂಬುರ್ ನಲ್ಲಿರುವ ಮಹಿಳಾ ಸುರಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ. ವಿದೇಶಿ ಯುವಕ ಸ್ಥಳೀಯ ಹೋಟೆಲ್ ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಆತನ ಗುರುತನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.