ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ (Mobile Network) ಸಿಗಬೇಕು ಎಂದರೆ ಅದು ದೊಡ್ಡ ಸಾಹಸ. ನಗರದಿಂದ ಅಲ್ಪ ದೂರ ಹೋದರೂ ಮೊಬೈಲ್ ನೆಟ್ವರ್ಕ್ ಸಿಗುವುದೇ ದುಸ್ತರ. ಹೀಗಿರುವಾಗ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಸಹ ಪಡಬಾರದ ಪಾಡು ಪಡಬೇಕು. ಇನ್ನು ಯಾಣದಂತಹ (Yana) ಪ್ರದೇಶದಲ್ಲಿ ಸಹ ನೆಟ್ಟರ್ಕ್ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ಸಂಪರ್ಕ ಸಿಗದೇ ಪ್ರವಾಸಿಗರು ಕಾಡು ಸೇರಿ ಕಾಣೆಯಾದ ಘಟನೆ ಸಹ ನಡೆದಿತ್ತು.
ಇದೀಗ ಉತ್ತರ ಕನ್ನಡ ಜಿಲ್ಲೆಯ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ-7 (Wi-Fi 7) ಸೇವೆ ಮಾರ್ಚ್ 8 ಅಂದರೆ ಮಹಾಶಿವರಾತ್ರಿ ದಿನದಂದು ಉದ್ಘಾಟನೆಗೊಳ್ಳಲಿದೆ. ಬಿಎಸ್‌ಎನ್‌ಎಲ್ (BSNL), ಭಾರತ ವೈಫೈ (Bharat Wifi) ಹಾಗೂ ಜಿಎನ್‌ಎ (GNA) ಕಂಪನಿಗಳ ಸಹಯೋಗದೊಂದಿಗೆ ಯಾಣದ ಶ್ರೀ ಭೈರವೇಶ್ವರ ದೇವಸ್ಥಾನದ ಬಳಿ ಹಾಗೂ ಎರಡು ಪಾರ್ಕಿಂಗ್ ಸ್ಥಳಗಳಲ್ಲಿ ವೈಫೈ ಸೌಲಭ್ಯ ಒದಗಿಸಲಿದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಸಂಪರ್ಕದ ಜೊತೆಗೆ ಡಿಜಿಟಲ್ ಪಾವತಿಗೂ ತುಂಬಾ ಅನುಕೂಲವಾಗಲಿದೆ. ಇದನ್ನೂ ಓದಿ: ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್ ಕೊಟ್ಟ ಕಾಂಗ್ರೆಸ್
Advertisement
Advertisement
ಏನಿದು ವೈಫೈ-7 ?
ಅತೀ ವೇಗ ಹಾಗೂ ಹೆಚ್ಚು ದೂರ ನೆಟ್ವರ್ಕ್ ಕವರೇಜ್ ಸಿಗಲಿದೆ. ಮಾಮೂಲಿ ವೈಫೈಗಿಂತ ದುಪ್ಪಟ್ಟು ವೇಗ ಹೊಂದಿದೆ. ಡೌನ್‌ಲೋಡ್ ಸ್ಪೀಡ್ ಸಹ ಹೆಚ್ಚಾಗಿದ್ದು, ಮುಂದುವರೆದ ದೇಶಗಳಲ್ಲಿ ಹೆಚ್ಚು ಬಳಕೆ ಆಗುತ್ತಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ
Advertisement
ಇನ್ನು ವೈಫೈ-7ನ್ನು ಬಳಸಲು ಶುಲ್ಕ ವಿಧಿಸಲಾಗುತ್ತದೆ. ಸಾಧನವಿರುವ 200 ರಿಂದ 250 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಕವರ್ ಆಗಲಿದೆ. ಈ ರೇಂಜ್‌ನಲ್ಲಿ ಇರುವ ಗ್ರಾಹಕ ಮೊಬೈಲ್‌ನಲ್ಲಿ ವೈಫೈ ಹುಡುಕಿದಾಗ ನೆಟ್ವರ್ಕ್ ಹೆಸರು ತೋರಿಸುತ್ತದೆ. ಇದನ್ನು ಆ್ಯಕ್ಟಿವ್ ಮಾಡಲು ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಎಷ್ಟು ಜಿಬಿ ಪ್ಯಾಕ್ ಎಂಬ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಇದನ್ನು ಬಳಸಬಹುದಾಗಿದೆ. ಇದನ್ನೂ ಓದಿ: ಕೇಂದ್ರದಲ್ಲಿ ʻಕೈʼ ಹಿಡಿದರೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ – ರೈತರಿಗೆ ಸಿಎಂ ಹೊಸ ಗ್ಯಾರಂಟಿ
Advertisement
ಉದ್ಘಾಟನೆ ಯಾರಿಂದ?
ಈ ಸೇವೆಯನ್ನು ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಉದ್ಘಾಟನೆ ಮಾಡಲಿದ್ದು, ಶಾಸಕ ದಿನಕರ್ ಶೆಟ್ಟಿ ಸೇರಿದಂತೆ ಇತರೇ ಅಧಿಕಾರಿಗಳ ಉಪಸ್ಥಿತಿ ಇರಲಿದೆ. ಇದನ್ನೂ ಓದಿ: ಹೇಳಿಕೆಗಳನ್ನು ಕೊಡುವಾಗ ಹುಷಾರಾಗಿರಿ- ರಾಗಾಗೆ ಚುನಾವಣಾ ಆಯೋಗ ಎಚ್ಚರಿಕೆ