ಭೋಪಾಲ್: ಶೀಘ್ರದಲ್ಲೇ 5 ಪೈಸೆಗೆ ಒಂದು ಲೀಟರ್ ನೀರನ್ನು ವಿತರಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಬಂದ್ರಭಾನ್ ನಲ್ಲಿ ನಡೆಯುತ್ತಿರುವ ನದಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿನ ಟ್ಯುಟಿಕೋರನ್ ನಲ್ಲಿ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದರು.
Advertisement
ನಮ್ಮ ದೇಶದಲ್ಲಿ ಹಲವು ರಾಜ್ಯಗಳು ನದಿ ನೀರಿಗಾಗಿ ಜಗಳವಾಡುತ್ತಿದೆ. ಆದರೆ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹೋಗುವ ನದಿಯ ಬಗ್ಗೆ ಯಾರು ಕಳವಳ ವ್ಯಕ್ತಪಡಿಸುವುದಿಲ್ಲ ಎಂದರು.
Advertisement
ಭಾರತದ ಮೂರು ನದಿಗಳು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುವುದಿಲ್ಲ ಜೊತೆಗೆ ಶಾಸಕರು ನೀರನ್ನು ತಡೆಯಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಹೇಳಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!
Advertisement
होशंगाबाद, मध्य प्रदेश में मुख्यमंत्री श्री.@ChouhanShivraj जी की अध्यक्षता में संपन्न हुए दो दिनी पंचम नदी महोत्सव के उद्घाटन समारोह में सम्मिलित हुआ।
हमारी नदियाँ जीवन और समृद्धि का आधार हैं, उनका संरक्षण न केवल जीवन बल्कि हमारे देश को गरीबी और भुखमरी से बचायेगा। pic.twitter.com/vOuDdmCQ8j
— Nitin Gadkari (@nitin_gadkari) March 16, 2018