ಬಳ್ಳಾರಿ: ರಜೆಗೆ ಬಂದಿದ್ದ ಯೋಧರೊಬ್ಬರು (Soldiers) ರಜೆಯನ್ನು ಮೊಟುಕುಗೊಳಿಸಿ ಸೈನ್ಯಕ್ಕೆ (Indian Army) ವಾಪಸ್ ತೆರಳಿದ್ದಾರೆ.
ಸೈಯ್ಯದ್ ಅವರು 30 ದಿನಗಳ ರಜೆ ಮೇಲೆ ಸ್ವಗ್ರಾಮ ಬಳ್ಳಾರಿಗೆ (Ballari) ಆಗಮಿಸಿದ್ದರು. ರಜೆಯಲ್ಲಿದ್ದಾಗಲೇ ಭಾರತ ಮತ್ತು ಪಾಕ್ ಮಧ್ಯೆ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಹೀಗಾಗಿ 9 ದಿನಗಳಿಗೆ ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್, ಅಮೆರಿಕಕ್ಕೂ ಶಾಕ್!
ರಾಜಸ್ಥಾನದ ಶ್ರೀರಂಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈಯ್ಯದ್ ಕಳೆದ ವರ್ಷ ಸೇನೆಗೆ ಸೇರ್ಪಡೆಯಾಗಿದ್ದರು. ಮರಳಿ ಕರ್ತವ್ಯಕ್ಕೆ ತೆರಳುವಾಗ ಸೈಯದ್ ಅವರಿಗೆ ಗ್ರಾಮಸ್ಥರು ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ರಜೆಗಿಂತಲೂ ದೇಶ ಸೇವೆ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್