LatestBelgaumDistrictsKarnatakaMain Post

ನಕಲಿ ನೋಟು ದಂಧೆ – ಜನರಿಗೆ ಪಂಗನಾಮ ಹಾಕುತ್ತಿದ್ದ ವಂಚಕರ ಬಂಧನ

ಚಿಕ್ಕೋಡಿ: ನಕಲಿ ನೋಟು ಮುದ್ರಣ ಇಟ್ಟುಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಣ ಡಬಲ್, ತ್ರಿಬಲ್ ಮಾಡುವುದಾಗಿ ಜನರಿಗೆ ವಂಚನೆ ಮಾಡುತ್ತಿದ್ದ, ಖದೀಮರನ್ನು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಘಟಪ್ರಭಾ ಮೂಲದ ಆಸೀಫ್ ಬಳೆಗಾರ್(26), ಗಜಾನನ ನಾಯಕ(31), ಸಲೀಲ್ ಸೈಯದ್(25) ಬಂಧಿತರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

nakali notu chikkodi 2

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರಮೇಶ್ ಘೋರ್ಪಡೆ ಎಂಬವರಿಗೆ ಈ ಖದೀಮರು ಲಕ್ಷಾಂತರ ರೂ. ಹಣ ಪಂಗನಾಮ ಹಾಕಿದ್ದರು. ವಂಚನೆಗೆ ಒಳಗಾದ ರಮೇಶ್ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ನೋಟು ಮುದ್ರಣ ಯಂತ್ರ ಸೇರಿ ಕಟ್ಟಿಂಗ್ ಬಾಕ್ಸ್, ವಿದ್ಯುತ್ ಸಂಬಂಧಿತ ವಸ್ತುಗಳು, ಬಿಳಿ ಕಾಗದ ಪತ್ರಗಳು, 59,000 ಸಾವಿರ ನಗದು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ

Related Articles

Leave a Reply

Your email address will not be published. Required fields are marked *