– 81.30 ಲಕ್ಷ ಮೌಲ್ಯದ ನೋಟು ಜಪ್ತಿ
ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಖೋಟಾ ನೋಟು ದಂಧೆ ಜಾಲ ಪತ್ತೆಯಾಗಿದ್ದು, ಬಿಎಂಟಿಸಿಯ ಇಬ್ಬರು ನೌಕರರು ಸೇರಿದಂತೆ, ಓರ್ವ ಫೋಟೋಗ್ರಾಫರ್ ನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಬಿಎಂಟಿಸಿಯ ನಿರ್ವಾಹಕ ಸೋಮಶೇಖರ್ ಹಾಗೂ ಚಾಲಕ ನಂಜೇಗೌಡ ಹಾಗೂ ಫೋಟೋಗ್ರಾಫರ್ ಕಿರಣ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ ವೇಳೆ 2000, 500 ರೂ. ಮುಖ ಬೆಲೆಯ ಖೋಟಾ ನೋಟು ಪ್ರಿಂಟ್ ಮಾಡುವ ಸಾಮಾಗ್ರಿ ಹಾಗೂ ಬಂಧಿತರಿಂದ ಒಟ್ಟು 81.30 ಲಕ್ಷ ರೂ. ಬೆಲೆಬಾಳುವ ಖೋಟಾ ನೋಟು ಜಪ್ತಿ ಮಾಡಿದ್ದಾರೆ.
Advertisement
Advertisement
ಆರೋಪಿಗಳು ನಗರದ ಗಾರೆಬಾವಿಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಪ್ರಿಂಟರ್, ಫೋಟೊ ಕಟ್ಟರ್, ಬಳಸಿ ಖೋಟಾ ನೋಟು ತಯಾರಿಸುತ್ತಿದ್ದರು. ಇದೇ ಏಪ್ರಿಲ್ 26 ರಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ಲಕ್ಷ ರೂ. ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿ ಚಾಲಕ ಮತ್ತು ನಿರ್ವಾಹಕ ಈ ದಂಧೆಯ ಕಿಂಗ್ ಪಿನ್‍ಗಳಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಿಎಂಟಿಸಿ ನೌಕರರಾಗಿ ಕೆಲಸಕ್ಕೆ ಹಾಜರಾಗುತ್ತಲೇ ಆರೋಪಿಗಳು ದಂಧೆ ನಡೆಸುತ್ತಿದ್ದರು.