ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ನಟನೆಯ ‘ಯುವ’ (Yuva) ಚಿತ್ರದ ಸಾಂಗ್ ಆಗಲು ಕೌಂಟ್‌ಡೌನ್ ಶುರುವಾಗಿದೆ. ಮಾ.2ರ ಸಂಜೆ ಚಾಮರಾಜನಗರದ ಜನತೆಯ ಮುಂದೆ ಅದ್ಧೂರಿಯಾಗಿ ಸಾಂಗ್ ರಿಲೀಸ್ ಆಗುತ್ತಿದೆ. ಚಿತ್ರದ ಮೊದಲ ಸಾಂಗ್ ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್
Advertisement
ರಾಜಕುಮಾರ, ಕೆಜಿಎಫ್(KGF) , ಕಾಂತಾರದಂತಹ (Kantara) ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ ‘ಯುವ’. ವಿಜಯ್ ಕಿರಗಂದೂರ್ ಈ ಚಿತ್ರದ ನಿರ್ಮಾಪಕರು.
Advertisement
ಸಂತೋಷ್ ಆನಂದರಾಮ್ ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ದೂರಿ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.
Advertisement
Advertisement
ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ಮೊದಲ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 29ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ಅಂಬಾನಿ ಮಗನ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಝಲಕ್
ಯುವ ರಾಜಕುಮಾರ್ ಹಾಗೂ ಸಪ್ತಮಿಗೌಡ(Sapthami Gowda) ನಾಯಕ – ನಾಯಕಿಯಾಗಿ ನಟಿಸಿರುವ ಯುವ ಚಿತ್ರದ ತಾರಾಬಳಗಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ನಟಿಸಿದ್ದಾರೆ.