ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು (Yash Fans) ನೆಚ್ಚಿನ ನಟನ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲು ಭರ್ಜರಿ ತಯಾರಿ ನಡೆಸಿದ್ದಾರೆ.
ಜನವರಿ 8ಕ್ಕೆ ಯಶ್ 40ನೇ ವಸಂತಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಂತೂ ಹುಟ್ಟುಹಬ್ಬದ ವಿಶ್ ಕಾರ್ಡ್ ಬ್ಯಾನರ್ ರಾಜಾಜಿಸುತ್ತಿವೆ.
ಯಶ್ ಅಭಿನಯಿಸಿದ್ದ `ಮಾಸ್ಟರ್‌ಪೀಸ್’ ಚಿತ್ರದಲ್ಲಿ ಕಾಟನ್‌ಪೇಟೆ ಹುಡುಗ್ರು ಕಿಲಾಡಿ ಅಂತಾರೆ, ಕತ್ರಿಗುಪ್ಪೆ ಹುಡುಗ್ರು ಕಿಂಗ್ ಅಂತಾರೆ, ಶಿವಾಜಿನಗರ ಹುಡುಗ್ರು ಭಾಯ್ ಅಂತಾರೆ, ಬಸವೇಶ್ವರನಗರದ ಹುಡುಗ್ರು ಬಾಸು ಅಂತಾರೆ ಎಂಬ ಡೈಲಾಗ್ ಇತ್ತು. ಅದರಂತೆ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಚಿಕ್ಕಜಾಲ, ಕೋನಪ್ಪನ ಅಗ್ರಹಾರ, ಕೊಡಿಗೇಹಳ್ಳಿ ಸೇರಿದಂತೆ ಹಲವೆಡೆ ಯಶ್ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ.
ಸದ್ಯಕ್ಕೆ ಟಾಕ್ಸಿಕ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಯಶ್ ಅಭಿಮಾನಿಗಳ ಜೊತೆ ನಿಂತು ಹುಟ್ಟುಹಬ್ಬ ಆಚರಿಸಿಕೊಳ್ಳೋದು ಈ ಸಲ ಅನುಮಾನ.
ಕಳೆದ 2 ವರ್ಷದ ಹಿಂದೆ ಗದಗ ಜಿಲ್ಲೆಯಲ್ಲಿ ಇಬ್ಬರು ಯಶ್ ಅಭಿಮಾನಿಗಳು ಸಾವನ್ನಪ್ಪಿದ್ರು. ಆದ್ದರಿಂದ ಮತ್ತೆ ಅಂತಹ ಕಹಿ ಘಟನೆ ನಡೆಯದಿರಲಿ ಅನ್ನೋದು ಯಶ್ ಅವರ ಬಯಕೆಯೂ ಆಗಿದೆ.



