ಮಡಿಕೇರಿ: ಶನಿವಾರ ಸಂಜೆ ಮೈಸೂರು ದಸರಾಕ್ಕೆ (Mysuru Dasara) ತೆರೆ ಬೀಳುತ್ತಿದಂತೆ ಇತ್ತ ಐತಿಹಾಸಿಕ ಮಡಿಕೇರಿ ದಸರಾದ (Madikeri Dasara) ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧಗೊಳ್ಳುತ್ತಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಮಂದಿ ಮಂಜಿನ ನಗರಿ ಮಡಿಕೇರಿಯತ್ತ ಆಗಮಿಸುತ್ತಿದ್ದಾರೆ.
Advertisement
ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ಮುಂಜಾನೆಯವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಲಕ್ಷಾಂತರ ರೂ. ಖರ್ಚು ಮಾಡಿ ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಅಂತಿಮ ತಯಾರಿ ಕಾರ್ಯಗಳು ನಡೆಯುತ್ತಿದೆ. ಹಗಲಿನಲ್ಲಿ ಮೈಸೂರು ದಸರಾ ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ಧಗೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶಿಸಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿಗಳು ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ. ಇದನ್ನೂ ಓದಿ: ವಿಜಯದಶಮಿ ವಿಶೇಷ| ನಾವು – ನೀವು ಬನ್ನಿ ತಗೊಂಡು ಬಂಗಾರದಂಗ ಇರೋಣ!
Advertisement
Advertisement
ಪೇಟೆ ಶ್ರೀರಾಮ ಮಂದಿರದಿಂದ ಲೋಕ ಕಲ್ಯಾಣಕ್ಕಾಗಿ ವಿಷ್ಟುವಿನ ಮತ್ಸ್ಯಾವತಾರ, ಕಂಚಿಕಾಮಾಕ್ಷಿ ದೇವಾಲಯದಿಂದ ಸಿಂಧೂರ ಗಣಪತಿ, ಕರವಲೆ ಭಗವತಿ, ಮಹಿಷ ಮರ್ಧಿನಿ ದೇವಾಲಯದಿಂದ ಶ್ರೀ ಕೊಲ್ಲುರೂ ಮೂಕಾಂಬಿಕೆ ಮಹಿಮೆ, ದೇಚೂರು ಶ್ರೀ ರಾಮಮಂದಿರದಿಂದ ಕಾಳಿಂಗ ಮರ್ಧನ, ಶ್ರೀ ಕೋದಂಡರಾಮ ದೇವಾಲಯದಿಂದ ಶ್ರೀ ರಾಮನಿಂದ ರಾವಣನ ಸಂಹಾರ, ಕೋಟೆ ಮಾರಿಯಮ್ಮ ದೇವಾಲಯದಿಂದ ಶ್ರೀ ಕೃಷ್ಣನ ಬಾಲಲೀಲೆ-ಕಂಸವಧೆ ಹೀಗೆ ನಾನಾ ರೀತಿಯ ಪೌರಾಣಿಕ ಕಥಾ ಸಾರಾಂಶವನ್ನು ಮಂಟಪದಲ್ಲಿ ಪ್ರಸ್ತುತಪಡಿಸಲು ಸಿದ್ಧತೆ ನಡೆಸುತ್ತಿದೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್: ಹೆಚ್‌ಡಿಕೆ
Advertisement
ದಶಮಂಟಪಗಳ ತೀರ್ಪು:
ಇಂದು (ಶನಿವಾರ) ರಾತ್ರಿ ಮಂಜಿನ ನಗರಿ ಮಡಿಕೇರಿ ನಗರದಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳ ತೀರ್ಪುಗಾರಿಕೆ ನಡೆಯಲಿದೆ. ರಾತ್ರಿ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಶ್ರೀ ಪೇಟೆ ಶ್ರೀ ರಾಮಮಂದಿರ, 11 ಗಂಟೆಗೆ ನಗರಸಭೆ ಮತ್ತು ಕೆ.ಇ.ಬಿ ರಸ್ತೆ ಮುಂಭಾಗ ದೇಚೂರು ಶ್ರೀ ರಾಮ ಮಂದಿರ, 11:40ಕ್ಕೆ ಹೋಟೆಲ್ ಪಾಪ್ಯುಲರ್ ಮುಂಭಾಗ ಶ್ರೀ ಚೌಡೇಶ್ವರಿ, ಬೆಳಗ್ಗೆ 12:20ಕ್ಕೆ ನಗರ ಪೊಲೀಸ್ ಠಾಣೆ ಮುಂಭಾಗ ಶ್ರೀ ಕೋಟೆ ಗಣಪತಿ, 1 ಗಂಟೆಗೆ ಮೆಟ್ರೋ ಫ್ರೆಷ್ ಮುಂಭಾಗ ಕೋದಂಡ ರಾಮ, 1:35ಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಶ್ರೀ ಕೋಟೆ ಮಾರಿಯಮ್ಮ, 2:10ಕ್ಕೆ ಸಿಂಧೂರ್ ಬಟ್ಟೆ ಮಳಿಗೆ ಮುಂಭಾಗ ಶ್ರೀ ಕರವಲೆ ಭಗವತಿ, ಬೆಳಗ್ಗೆ 2:50ಕ್ಕೆ ಕೊಡವ ಸಮಾಜ ಮುಂಭಾಗ ಶ್ರೀ ದಂಡಿನ ಮಾರಿಯಮ್ಮ, 3:25ಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ ಶ್ರೀ ಕಂಚಿ ಕಾಮಾಕ್ಷಿ, 4 ಗಂಟೆಗೆ ಕಾವೇರಿ ಕಲಾಕ್ಷೇತ್ರ ಮುಂಭಾಗ ಶ್ರೀ ಚೌಟಿ ಮಾರಿಯಮ್ಮ ಪ್ರದರ್ಶನ ನೀಡಲಿದೆ. ಇದನ್ನೂ ಓದಿ: Mysuru Dasara| ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ