ನವದೆಹಲಿ: ದೇಶದ 133 ಕೋಟಿ ಜನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಕೇಂದ್ರ ಬಜೆಟ್ ಇವತ್ತು ಸಂಸತ್‍ನಲ್ಲಿ ಮಂಡನೆಯಾಗಲಿದೆ. ನೋಟು ನಿಷೇಧದ ಬಳಿಕ ಏರುಪೇರಾಗಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವ ಅರುಣ್ ಜೇಟ್ಲಿ ಇವತ್ತು ಬಜೆಟ್ ಮಂಡಿಸ್ತಿದ್ದಾರೆ.
ಬೆಳಗ್ಗೆ 9.30ಕ್ಕೆ ಬಜೆಟ್ ಅಧಿವೇಶನ ಆರಂಭವಾಗಲಿದೆ. 10 ಗಂಟೆ ಸುಮಾರಿಗೆ ಬಜೆಟ್ ಪ್ರತಿಗಳು ಸಂಸತ್‍ಗೆ ಬರಲಿವೆ. ಲೋಕಸಭಾ ಸ್ಪೀಕರ್ ಅನುಮತಿ ನೀಡಿದ ಬಳಿಕ ಬೆಳಗ್ಗೆ 11 ಗಂಟೆಗೆ ಕುತೂಹಲಕಾರಿ ಬಜೆಟ್ ಮಂಡನೆಯಾಗಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ಬಜೆಟ್ ಜೊತೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗ್ತಿದೆ. ಈ ಮೂಲಕ 92 ವರ್ಷಗಳ ಹಿಸ್ಟರಿಗೆ ಮೋದಿ ಸರ್ಕಾರ ಬ್ರೇಕ್ ಹಾಕಿದೆ.
Advertisement
1921ರಲ್ಲಿ ಬ್ರಿಟೀಷ್ ಅಧಿಕಾರಿ ವಿಲಿಯಂ ಮಿಚೆಲ್ ಮೊದಲ ರೈಲ್ವೆ ಬಜೆಟ್ ಮಂಡಿಸಿದ್ರು. ಕಳೆದ ವರ್ಷ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡಿಸಿದ್ರು. ಡಿಜಿಟಲ್ ಇಂಡಿಯಾಗೆ ಒತ್ತು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಮೊದಲ ಬಾರಿಗೆ ಆನ್‍ಲೈನ್‍ನಲ್ಲಿ ಬಜೆಟ್ ಪ್ರತಿಗೆ ಮೊರೆ ಹೋಗಿದೆ. ಆದ್ರೆ ಸಂಸತ್ ಸದಸ್ಯರಿಗಾಗಿ ಮಾತ್ರ 1 ಸಾವಿರ ಬಜೆಟ್ ಪ್ರತಿಗಳನ್ನ ಮುದ್ರಣ ಮಾಡಿದೆ.