ವಾಟಿಂಗ್ಟನ್: ಅಮೆರಿಕದ (USA) ಕಾಪ್ ಹೇಟಿಂಗ್ ಕ್ವೀನ್ಸ್ ಕೌನ್ಸಿಲ್‌ನ (Queens CouncilWoman) ಟಿಫಾನಿ ಕ್ಯಾಬನ್ ಅವರು ಲೈಂಗಿಕ ಕಾರ್ಯಕರ್ತೆಯರ ಉದ್ಯಮವನ್ನ ಕಾನೂನುಬದ್ಧಗೊಳಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ (Sex Worker) ಸಹಾಯ ನೀಡುವ ಸಂಬಂಧ ಹೊಸ ಮಸೂದೆಯೊಂದನ್ನ ಮಂಡಿಸಿದ್ದಾರೆ.
Advertisement
ನ್ಯೂಯಾರ್ಕ್‌ನಲ್ಲಿ ನಡೆದ ಕ್ವೀನ್ಸ್ ಕೌನ್ಸಿಲ್ ಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಸೆಕ್ಸ್ ವೃತ್ತಿ ಅನ್ನೋದು ಅಪರಾಧವಲ್ಲ. ಹಿಂದಿನ ಮತ್ತು ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರು ತೆರಿಗೆದಾರರ ನಿಧಿಯ ಸಹಾಯವನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಮಸೂದೆಯೂ ಕಾನೂನುಬದ್ಧವಾಗಿರಲಿದ್ದು, ಜೀವನೋಪಾಯಕ್ಕಾಗಿ ದೇಹವನ್ನು ಪ್ರದರ್ಶಿಸುವ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಸಹಾಯ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಟ್ರಂಪ್ ಮನೆಯ ಬೆಡ್‌ರೂಮ್, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು
Advertisement
ನ್ಯೂಯಾರ್ಕ್ ನಗರವು ತನ್ನ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಹಾಗಾಗಿ ಜೀವನಕ್ಕಾಗಿ ಏನು ಮಾಡಿದರೂ ಲೆಕ್ಕಿಸುವುದಿಲ್ಲ ಎಂದರಲ್ಲದೇ, ಲೈಂಗಿಕ ಕೆಲಸವೂ ಕೆಲಸವೇ ಆಗಿದೆ ಎಂದು ಕ್ಯಾಬನ್ (Tiffany Caban) ಹೇಳಿದ್ದಾರೆ.
Advertisement
Advertisement
ಅಲ್ಲದೇ ಈ ಮಸೂದೆ ಮಂಡಿಸುವುದರಿಂದ ಚಲನಶೀಲತೆ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಒಳಿಗಾಗಿ ಆರ್ಥಿಕ ಬೆಂಬಲ ಒದಗಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತರೊಂದಿಗೆ ನೇರವಾಗಿ ಕೆಲಸ ಮಾಡುವ ಗುಂಪುಗಳಿಗೆ ಸರ್ಕಾರದಿಂದ ಅನುದಾನ ಒದಗಿಸಬಹುದು. ಉದ್ಯೋಗದ ಆಧಾರದ ಮೇಲೆ ತಾರತಮ್ಯ ನಿಷೇಧಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತೆಯರ ಸ್ಥಾನಮಾನವನ್ನು ರಕ್ಷಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು