ಬೀದರ್: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕುದುರೆ ವ್ಯಾಪಾರ ಜೋರಾಗಿದ್ದು, ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮ ಪಂಚಾಯತಿಯ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಿಗೆ ಕಾಂಗ್ರೆಸ್ ಮುಖಂಡರು ಹಣದ ಆಮಿಷ ಒಡ್ಡಿದ್ದಾರೆ.
ಕಾಂಗ್ರೆಸ್ ಮುಖಂಡ ಆನಂದ್ ದೇವಪ್ಪ, ನರಶೆಟ್ಟಿ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಮುಚಳಂಬ ಗ್ರಾಮದ ಲಿಂಗೇಶ್ವರ ದೇವಸ್ಥಾನದಲ್ಲಿ ಕುದುರೆ ವ್ಯಾಪಾರ ಮಾಡಿದ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮಕ್ಕಳನ್ನು ಪೋಷಕರು ಈ ರೀತಿ ಕಾಪಾಡಿಕೊಳ್ಳಿ
ಬಿಜೆಪಿ ಒಂದು ಮತಕ್ಕೆ ಅಡ್ವಾನ್ಸ್ ಆಗಿ 10 ಸಾವಿರ ನೀಡುತ್ತಿದ್ದು, ನಾವು ಅಡ್ವಾನ್ಸ್ ಆಗಿ 20 ಸಾವಿರ ನೀಡುತ್ತೇವೆ. ಬಳಿಕ ಬಿಜೆಪಿ 60 ರಿಂದ 70 ಸಾವಿರ ಫಿಕ್ಸ್ ಮಾಡಿದೆ. ನಾವು ಇನ್ನು ಹೆಚ್ಚಿನ ಹಣ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹಣದ ಆಮಿಷ ಹಾಕಿದ್ದಾರೆ.
ಈ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಹೋದರ ಭೀಮ್ ರಾವ್ ಬಿ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.