– ಯುದ್ಧ ಸಾಮಾಗ್ರಿಗಳ ಮೌಲ್ಯ ಹೀಗಿದೆ
ನವದೆಹಲಿ: ಭಾರತೀಯ ವಾಯುಸೇನೆ ಜೆಇಎಂ ಉಗ್ರಸಂಘಟನೆಗಳ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಸರ್ವನಾಶ ಮಾಡಿದೆ. ಫೆ.26ರಂದು ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಮಿಂಚಿನ ವೇಗದಲ್ಲಿ ವೈಮಾನಿಕ ದಾಳಿ ನಡೆಸಿ ಸೇಫಾಗಿ ತವರಿಗೆ ಬಂದು ನೆಲೆಸಿದೆ. ಬಾಲಾಕೋಟ್‍ನಲ್ಲಿರುವ ಉಗ್ರರ ತಾಣ ನಾಶ ಮಾಡಲು 2,568 ಕೋಟಿ ರೂ.ಮೌಲ್ಯದ ವಾಯುಪಡೆಯ ಯುದ್ಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ.
ದಾಳಿಯಲ್ಲಿ ಸಾವಿರ ಕೆಜಿ ಬಾಂಬ್ ಬಳಕೆ ಮಾಡಲಾಗಿದ್ದು, ಪ್ರತಿ ಬಾಂಬ್ ಮೌಲ್ಯ 56 ಲಕ್ಷ ರೂ. ಆಗಿದೆ. ಒಂದೊಂದು ಬಾಂಬ್ 225 ಕೆಜಿ ತೂಕದ ಜಿಬಿಯು 12 ಬಾಂಬ್ ಸ್ಫೋಟಿಸಿದ್ದು, ಬಾಂಬ್ ದಾಳಿಗೆ 1.7 ಕೋಟಿಯಿಂದ 2.2 ಕೋಟಿ ವೆಚ್ಚವಾಗಿದೆ.
ಫೆ.26 ಮುಂಜಾನೆ 3.30ರ ವೇಳೆಗೆ ಬಾಲಕೋಟ್, ಮುಜಾಫರಾಬಾದ್, ಚಕ್ಕೋತಿಯಲ್ಲಿ ನೆಲೆಸಿದ್ದ 200 ರಿಂದ 300 ಉಗ್ರರನ್ನು ಹೊಡೆದುರುಳಿಸಿ ಉಗ್ರರ ತಾಣ ಧ್ವಂಸಗೊಳಿಸಲಾಯ್ತು. ಉಗ್ರರ ಬೇಟೆಗೆ 6,300 ಕೋಟಿ ಮೌಲ್ಯದ ವಸ್ತುಗಳನ್ನು ಸಜ್ಜುಗೊಳಿಸಿತ್ತು. ಇವುಗಳಲ್ಲಿ ಯುದ್ಧ ವಿಮಾನ, ಬಾಂಬ್ ಎಲ್ಲವೂ ಸೇರಿದಂತೆ 3,686 ಕೋಟಿ ಮೌಲ್ಯದ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!
ಉಗ್ರರ ಬೇಟೆ ಸಂದರ್ಭದಲ್ಲಿ ಪಾಕ್ ಸೇನೆ ಪ್ರತಿದಾಳಿ ನಡೆಸಬಹುದು ಅಂತಾ ಭಾರತೀಯ ವಾಯುಪಡೆ 1,750 ಕೋಟಿ ಮೌಲ್ಯದ ರೆಡಾರ್ ಹೊಂದಿರುವ ಎಡಬ್ಲ್ಯೂಎಸಿಎಸ್ ವಿಮಾನದ ಕಾವಲಿಗಿರಿಸಿತ್ತು. ಕಾರ್ಯಾಚರಣೆಯಲ್ಲಿ ವಿಮಾನಗಳಿಗೆ ಇಂಧನ ತುಂಬುವ 22 ಕೋಟಿ ಮೌಲ್ಯದ ಟ್ಯಾಂಕರ್ ಜೆಟ್, 80 ಕೋಟಿ ಮೌಲ್ಯದ ಡ್ರೋಣ್ ಕ್ಯಾಮೆರಾಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯ್ತು. ಅಲ್ಲದೇ 3 ಸುಖೋಯ್ ವಿಮಾನಗಳನ್ನು ಸನ್ನದ್ಧವಾಗಿರಿಸಿತ್ತು.
ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಹಾರಿದ ಮಿರಾಜ್ 2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೂ ಸಣ್ಣದೊಂದು ಸುಳಿವು ನೀಡದೇ 21 ನಿಮಿಷಗಳಲ್ಲಿ ಉಗ್ರರ ತಾಣಗಳನ್ನು ಸರ್ವನಾಶ ಮಾಡಿ ಭಾರತಕ್ಕೆ ಸೇಫಾಗಿ ಮರಳಿದೆ. ಆದರೆ 21 ನಿಮಿಷಗಳ ಯುದ್ಧಕ್ಕೆ ಸಾವಿರಾರು ಕೋಟಿ ವೆಚ್ಚವಾಗಿದ್ದು ಬಲಿಷ್ಠ ಭಾರತೀಯ ಸೇನೆ ಎದುರು ಭಿಕ್ಷುಕ ರಾಷ್ಟ್ರ ಪಾಕಿಸ್ತಾನ ಯುದ್ಧಕ್ಕೆ ಮುಂದಾಗುತ್ತಾ ಅನ್ನೋದು ಕಾದು ನೋಡಬೇಕಿದೆ.
ದಾಳಿಗೆ ಬಳಕೆಯಾದ ಯುದ್ಧಸಾಮಾಗ್ರಿಗಳ ಮೌಲ್ಯ
* 12 ಮಿರಾಜ್ 2000 ಜೆಟ್ ಮೌಲ್ಯ – 2,568 ಕೋಟಿ
* ಎಡಬ್ಲ್ಯೂಎಸಿಆರ್ ವಿಮಾನ – 1750 ಕೋಟಿ
* 1 ಸುಖೋಯ್ ಯುದ್ಧ ವಿಮಾನಕ್ಕೆ 358 ಕೋಟಿ ವೆಚ್ಚ
* 3 ಸುಖೋಯ್ ಎಸ್‍ಯು-30ಎಸ್ ಯುದ್ಧ ವಿಮಾನ – 1,074 ಕೋಟಿ
* 1 ಮಿಗ್ 29 ಎಸ್ ಯುದ್ಧ ವಿಮಾನಕ್ಕೆ 154 ಕೋಟಿ
* 5 ಮಿಗ್ 29 ಎಸ್ ಯುದ್ಧ ವಿಮಾನ – 770 ಕೋಟಿ
* ಹೆರೋನ್ ಡ್ರೋಣ್ – 80 ಕೋಟಿ
* ವಿಮಾನಗಳಿಗೆ ಇಂಧನ ತುಂಬುವ ಟ್ಯಾಂಕರ್ ಜೆಟ್ – 22 ಕೋಟಿ
* ಒಟ್ಟಾರೆ 21 ನಿಮಿಷದ ದಾಳಿಗೆ – 6, 264 ಕೋಟಿ ರೂ.ಸೇನಾ ಸಂಪತ್ತಿನ ಬಳಕೆ
https://www.youtube.com/watch?v=tWx5VyQ388w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv