ಹಾಸನ: ಪಶುಭಾಗ್ಯ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ ಎಂದು ಹಾಸನ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಮಾಜಿ ಸಚಿವ ಎ ಮಂಜು ವಿರುದ್ಧ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಹಿರಿಯ ಶಾಸಕ ಎ.ಟಿ ರಾಮಸ್ವಾಮಿ ಪಶುಭಾಗ್ಯ ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಲಾಗಿದೆ. ಮಾಜಿ ಸಚಿವರು ತಮ್ಮ ಕಡೆಯವರಿಗೆ ಮಾತ್ರ ಸಹಾಯಧನ ಕೊಡಿಸಿದ್ದಾರೆ. ಹಸುವನ್ನೇ ನೇರವಾಗಿ ಖರೀದಿಸಿ ನೀಡಬೇಕಿದ್ದ ಸಹಕಾರಿ ಸಂಘಗಳು ಕೇವಲ ಸಬ್ಸಿಡಿ ಹಣ ನೀಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು. ಇದನ್ನು ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ
Advertisement
Advertisement
ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರ ನೇರ ನೇರ ಆರೋಪ ಮಾಡಿದ್ದು, ಈ ವಿಚಾರದಲ್ಲಿಯೇ ಸ್ವಪಕ್ಷೀಯ ಶಾಸಕರ ನಡುವೆಯೇ ವಾಗ್ವಾದಕ್ಕೆ ಕಾರಣವಾಯಿತು. ಶಾಸಕರ ನಡುವೇ ವಾಗ್ವಾದ ನಡೆಯುತ್ತಿದ್ದರೆ ದೇವೇಗೌಡರು ಮೌನಕ್ಕೆ ಶರಣಾಗಿದ್ದರು. ಹಾಸನದ ಚನ್ನರಾಯಪಟ್ಟಣ ಶಾಸಕ ಸಿಎನ್ ಬಾಲಕೃಷ್ಣ ಮೇಲೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಲಿಂಗೇಶ್ ಅವರು ಆರೋಪಗಳ ಸುರಿಮಳೆಗೈದರು. ಇದನ್ನು ಓದಿ: `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv