Connect with us

Davanagere

ಸರ್ಕಾರದ ಶೂ ಭಾಗ್ಯದಲ್ಲೂ ಗೋಲ್ ಮಾಲ್- ಪ್ರತಿ ಮಕ್ಕಳ ಶೂನಲ್ಲೂ ಪಡೀತಾರೆ ಕಮಿಷನ್

Published

on

ದಾವಣಗೆರೆ: ಸರ್ಕಾರಿ ಶಾಲೆಗಳ ಕಡೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದ್ರೆ ಈ ಯೋಜನೆಗಳಲ್ಲಿ ಮಕ್ಕಳಿಗೆ ತಲುಪಬೇಕಾದ ಹಣದಲ್ಲಿ ಕಮಿಷನ್ ಅಸೆಯಿಂದ ಮಧ್ಯವರ್ತಿಗಳು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ.

ಅಂತಹದ್ದೇ ಒಂದು ಭ್ರಷ್ಟಾಚಾರದ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕಿದ್ದ ಶೂ ಗಳಲ್ಲಿ ಶಾಲೆಯ ಎಸ್‍ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಕಮಿಷನ್ ಕೇಳುತ್ತಿರುವ ಎಕ್ಸ್ ಕ್ಲ್ಯೂಸಿವ್ ದೃಶ್ಯಗಳು ಹಾಗೂ ಫೋನ್ ರೆಕಾರ್ಡ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದಾವಣಗೆರೆಯ ಕೆಲ ಸರ್ಕಾರಿ ಶಾಲೆಗಳಲ್ಲಿ ಶೂ ಸಪ್ಲೈ ಏಜೆನ್ಸಿ ಗಳ ಜೊತೆ ಡೈರೆಕ್ಟ್ ಡೀಲ್ ಮಾತನಾಡುತ್ತಿದ್ದಾರೆ. ಒಂದು ಮಗುವಿಗೆ 25 ರೂಪಾಯಿ ಗಳಿಂದ 40 ರೂಪಾಯಿಗಳವರೆಗೂ ಕಮಿಷನ್ ಮಾತನಾಡುತ್ತಿದ್ದಾರೆ. ಸರ್ಕಾರ ಬಡ ಮಕ್ಕಳಿಗೆ ಶೂ ಭಾಗ್ಯ ಜಾರಿಗೆ ತಂದ್ರೆ ಇಲ್ಲಿನ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಕಮಿಷನ್ ಭಾಗ್ಯವನ್ನು ಹುಟ್ಟಿಹಾಕಿಕೊಂಡಿದ್ದಾರೆ.

ದಾವಣಗೆರೆಯಲ್ಲಿ 1 ರಿಂದ 10 ನೇ ತರಗತಿವರೆಗೆ 1607 ಸರ್ಕಾರಿ ಶಾಲೆಗಳಿದ್ದು, 1.43 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ಮಕ್ಕಳಿಗೆ ಶೂ ಭಾಗ್ಯವನ್ನು ಮೂರು ಹಂತಗಳಲ್ಲಿ ವಿತರಣೆಗೆ ಕ್ರಮ ಜರುಗಿಸಿದೆ.

* 1 ರಿಂದ 5 ನೇ ತರಗತಿ ಮಕ್ಕಳಿಗೆ ಒಂದು ಹಂತದಲ್ಲಿ ವಿತರಣೆ, ಅದಕ್ಕೆ ತಲಾ ಒಬ್ಬ ವಿದ್ಯಾರ್ಥಿಗೆ 265 ರೂಪಾಯಿ ನಿಗದಿ.
* 6-8 ನೇ ತರಗತಿಗೆ ಮಕ್ಕಳಿಗೆ ಎರಡನೇ ಹಂತದಲ್ಲಿ ವಿತರಣೆ, ತಲಾ ಒಬ್ಬ ವಿದ್ಯಾರ್ಥಿಗೆ 295 ರೂಪಾಯಿ ನಿಗದಿ.
* 9-10 ನೇ ತರಗತಿ ಮಕ್ಕಳಿಗೆ ಮೂರನೇ ಹಂತದಲ್ಲಿ ವಿತರಣೆ, ತಲಾ ಒಬ್ಬ ವಿದ್ಯಾರ್ಥಿಗೆ 325 ರೂಪಾಯಿ ನಿಗದಿ ಮಾಡಲಾಗಿದೆ.
* 1 ಜೊತೆ ಶೂ, 2 ಜೊತೆ ಸಾಕ್ಸ್ ವಿತರಣೆಗೆ ಸರ್ಕಾರ ಆದೇಶ ನೀಡಿದೆ.

ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಶೂ ಸರಿಯಾಗಿ ವಿತರಣೆ ಮಾಡಲಾಗಿದೇಯೋ ಇಲ್ಲವೋ, ಕಟ್ಟ ಕಡೆಯ ಫಲಾನುಭವಿಗೆ ತಲುಪಿದೆಯೋ ಎಂದು ಗಮನಿಸಲು ಹಾಗೂ ಪರಿಶೀಲನೆ ಮಾಡಲು ಸರ್ಕಾರ ಒಂದು ತಾಲೂಕಿಗೆ 3 ರಿಂದ 4 ಇಲಾಖೇತರ ಅಧಿಕಾರಿಗಳ ಕಮಿಟಿ ಮಾಡಿದೆ. ಆದರೂ ಸಹ ಅಧಿಕಾರಿಗಳು ಮಾತ್ರ ಇದನ್ನು ಕಂಡೂ ಕಾಣದ ರೀತಿಯಲ್ಲಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *