-ಮಾನನಷ್ಟ ಮೊಕದ್ದಮೆ ಹಾಕುತ್ತೇನೆ
ಚಿತ್ರದುರ್ಗ: ರಾಜಕೀಯದಲ್ಲಿ ಆರೋಪ ಮಾಡುವವರು ಇರುತ್ತಾರೆ. ಯಾರು ಉತ್ತಮ ಕೆಲಸ ಮಾಡುತ್ತಾರೆ ಅಂತವರ ವಿರುದ್ಧ ಕೆಲವರು ಸುಮ್ಮನೆ ಆರೋಪ ಮಾಡುತ್ತಾರೆ. ನನ್ನ ವಿರುದ್ಧದ ಭ್ರಷ್ಟಾಚಾರ ದೂರು ದುರುದ್ದೇಶ ಪೂರಿತ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
Advertisement
ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಎಲ್ಲರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧವೂ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಸಿಲ್ವರ್ ಬ್ರಿಡ್ಜ್ ನಿರ್ಮಾಣಕ್ಕೆ 500 ಕೋಟಿ ಕಿಕ್ ಬ್ಯಾಕ್ ಆರೋಪ ಬಂದಿತ್ತು. ಆರೋಪ ಮಾಡುವವರು ಇರುವುದು ಸಹಜ ನಾವು ಮಧ್ಯವರ್ತಿ, ಏಜೆಂಟ್‍ಗಳನ್ನು ದೂರವಿಟ್ಟಾಗ ಅವರು ಅಸಮಾಧಾನಗೊಂಡು ಈ ರೀತಿ ಹೇಳಿಕೆ ಕೊಡುವುದು ಸಹಜ. ಭ್ರಷ್ಟಾಚಾರ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧ. ನಮ್ಮಲ್ಲಿ ಯಾವುದೇ ಕಳ್ಳತನದ ಪ್ರಕ್ರಿಯೆ ಇಲ್ಲ. ಕೃಷಿ ಇಲಾಖೆ ಒಂದೇ ಸಂಪೂರ್ಣ ಪಾರದರ್ಶಕವಾಗಿ ಕೆಲಸ ವಿರ್ವಹಿಸುತ್ತದೆ. ಯಾರು ಆರೋಪ ಮಾಡಿದ್ದಾರೆ ಅವರು ಆರೋಪವನ್ನು ಸಾಬೀತು ಮಾಡಬೇಕು ಇಲ್ಲದಿದದ್ದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಚಿತ್ರರಂಗವಷ್ಟೇ ಅಲ್ಲ ಕನ್ನಡ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಕ್ಕೆ ಹೆಮ್ಮೆಯಾಗ್ತಿದೆ: ಬೊಮ್ಮಾಯಿ
Advertisement
Advertisement
ಕಾಂಗ್ರೆಸ್ ಜನವಿರೋಧಿ ಆಗಿದ್ದಕ್ಕೆ ಜನರಿಂದ ತಿರಸ್ಕಾರವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವಕಾಶವಿಲ್ಲ. ಅವರು ಹಾಗೆ ಇರುತ್ತಾರೆ. 21ದಿನ ಗಣೇಶೋತ್ಸವ ಆಚರಣೆಗೆ ಸಂಘ ಪರಿವಾರ ಪಟ್ಟು ವಿಚಾರವಾಗಿ ಮಾತನಾಡಿ, ಗಣೇಶೋತ್ಸವ 2ನೇ ದಿನ ನಡೆಯುತ್ತಿದ್ದು, ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಉಡುಪಿಯಲ್ಲಿ ಮತಾಂತರ ಪ್ರಕರಣ ಬಗ್ಗೆ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.
Advertisement
ಹಿರಿಯೂರು ಕ್ಷೇತ್ರದತ್ತ ಬಿ.ಸಿ.ಪಾಟೀಲ್ ಹಚ್ಚು ಒಲವು ವಿಚಾರವಾಗಿ ಮಾತನಾಡಿ, ಕ್ಷೇತ್ರದ ಶಾಸಕಿ ಆಹ್ವಾನದ ಮೇರೆಗೆ ಆಗಮಿಸಿದ್ದೇನೆ. ಹಿರಿಯೂರಲ್ಲಿ ಹಿಂದೆ ಪಿಎಸ್‍ಐ ಆಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಹಿರಿಯೂರು ಜನರ ಮೇಲೆ ನನಗೆ ಪ್ರೀತಿ ಜಾಸ್ತಿ ಇದೆ. ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ ಹಿರಿಕೇರೂರು ಕ್ಷೇತ್ರ ಭದ್ರವಾಗಿದೆ ನನಗೆ ಅದೇ ಸಾಕು ಎಂದರು. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿ