Connect with us

Bengaluru City

ಹೂತಿಟ್ಟ ಶವದ ತಲೆಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

Published

on

ಬೆಂಗಳೂರು: ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಯ ಹೂತಿಟ್ಟ ಶವದ ತಲೆಯನ್ನ ಮಾಟ ಮಂತ್ರ ಮಾಡುವ ಮಾಂತ್ರಿಕರು ಹೊರತೆಗೆದಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಕೆರೆಯ ಸ್ಮಶಾನದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಅರಸಯ್ಯ ಎಂಬವರ ದೇಹದ ತಲೆ ಭಾಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಪೂಜೆಯ ನೆಪದಲ್ಲಿ ಮಾಟಮಂತ್ರವನ್ನ ಮಾಡಿ ಹೊರ ತೆಗೆದಿದ್ದಾರೆ.

ಕೆಲ ದಿನಗಳ ಹಿಂದೆ ಒಂದು ತಿಂಗಳ ತಿಥಿ ಕಾರ್ಯವನ್ನು ಕುಟುಂಬದವರು ಕೈಗೊಂಡ, ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ ಎಂದು ಅರಸಯ್ಯನವರ ಕುಟುಂಬದವರು ಹೇಳುತ್ತಿದ್ದಾರೆ. ಶತಮಾನದ ಹಳೆಯದಾದ ಸ್ಮಶಾನದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದೂ ಕೂಡ ನಡೆದಿರಲಿಲ್ಲ, ಇದೀಗ ಈ ಘಟನೆ ನಡೆದಿರುವುದು ಗ್ರಾಮಸ್ಥರಲ್ಲೂ ಭಯದ ಜೊತೆಗೆ ಆತಂಕವನ್ನು ಸೃಷ್ಟಿಸಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಈ ಘಟನೆ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *