ಬೆಂಗಳೂರು: ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೆ ಟ್ರಾಫಿಕ್ ನಿಯಮವನ್ನು ಪಾಲಿಸದೇ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಸಂಚಾರಿ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ? ಜನಪ್ರತಿನಿಧಿಗಳನ್ನ ಕೇಳೊರಿಲ್ವಾ? ಜನಪ್ರತಿನಿಧಿಗಳು ಏನ್ ಮಾಡಿದರೂ ಸರಿ, ನಾವ್ ತಪ್ಪಾ? ಇಂತಹ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.
ಹೊಸ ವರ್ಷದಲ್ಲಿ ಕುಡಿದ ವಾಹನ ಚಲಾಯಿಸುತ್ತಿದ್ದರು ಅಂತ ಸುಮಾರು 500ಕ್ಕೂ ಹೆಚ್ಚು ಜನರಿಗೆ ದಂಡ ಹಾಕಲಾಗಿದೆ. ಹೀಗೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರೋರಿಗೆ ದಂಡ ಹಾಕುವುದಾದರೆ ಜನಪ್ರತಿನಿಧಿಗಳು ಮಾತ್ರ ರೂಲ್ಸ್ ಬ್ರೇಕ್ ಮಾಡಿದರು ಕೇಳುವುದಿಲ್ಲ.
Advertisement
Advertisement
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಕ್ಕೆ ಬಿಡುಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇತ್ತ ಸಿಎಂ ಕುಮಾರಸ್ವಾಮಿ ಚಾಲಕರಂತೂ ಸಿಎಂ ಚಾಲಕ ಅಂತ ಧಿಮಾಕು ತೋರಿಸಿ, ಸೀಟ್ ಬೆಲ್ಟ್ ಹಾಕದೇ ನಿಯಮವನ್ನು ಬ್ರೇಕ್ ಮಾಡಿದ್ದಾರೆ.
Advertisement
ಅಷ್ಟೇ ಅಲ್ಲದೇ ಇತ್ತ ಮೇಯರ್ ಗಂಗಾಬಿಕ ಮಲ್ಲಿಕಾರ್ಜುನ್, ಉಪಮೇಯರ್ ಭದ್ರೇಗೌಡ ಅವರು ಕೂಡ ಸಂಚಾರಿ ನಿಯಮ ಪಾಲನೆಗೆ ಕಿಮ್ಮತ್ತು ಕೊಟ್ಟಿಲ್ಲ. ಇವರಷ್ಟೇ ಅಲ್ಲದೇ ಮಾಜಿ ಮೇಯರ್ ಪದ್ಮಾವತಿ, ಕಾರ್ಪೋರೇಟರ್ ಗಳಂತೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಬೇದ ಭಾವವಿಲ್ಲದೇ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.
Advertisement
ಪೊಲೀಸರು ಸಿಎಂ ಕುಮಾರಸ್ವಾಮಿಗೆ ಝೀರೋ ಟ್ರಾಫಿಕ್ ಕೊಡುತ್ತಾರೆ. ಆಗ ನಿಯಮ ಉಲ್ಲಂಘಿಸಿದ್ದು ನೋಡಿಲ್ವಾ? ಡಿಸಿಎಂಗೂ ಸಿಗ್ನಲ್ ಫ್ರೀ ಕೊಡುತ್ತಾರೆ ಆಗಲೂ ನೋಡಲ್ವಾ? ಇನ್ನು ಮಾಸಿಕ ಸಭೆಗೆ ಬರುವ ಕಾರ್ಪೋರೇಟರ್ ಗಳಿಗೂ ಭದ್ರತೆ ಕೊಡುತ್ತಾರೆ. ಆಗಲೂ ಪೊಲೀಸರು ನೋಡಿದರೂ ನೋಡದಂತೆ ಇರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv