– ಕಾರ್ಪೊರೇಟರ್ ಇಮ್ರಾನ್ ಪಾಶಾ ದರ್ಬಾರ್
ಬೆಂಗಳೂರು: ಬಿಬಿಎಂಪಿ ಶಿಕ್ಷಣ ಸಮಿತಿಯಲ್ಲಿ ಮಾಜಿ ರೌಡಿ ಶೀಟರ್ ದರ್ಬಾರ್ ಎದ್ದು ಕಾಣುತ್ತಿದೆ. ಸಾಹಿತಿಗಳಿಗೆ ಅವಮಾನ ಮಾಡಿ ಕಚೇರಿಯನ್ನು ಸಂಪೂರ್ಣ ಹಸಿರುಮಯ ಮಾಡಲು ಹೊರಟ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು. ಇಮ್ರಾನ್ ಪಾಷಾ ಮೇಲೆ ಹತ್ತಾರು ಕೇಸ್‍ಗಳಿದ್ದು, ಈಗ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಅವಾಂತರ ಸೃಷ್ಟಿಸಿದ್ದಾರೆ. ಕಚೇರಿಯಲ್ಲಿ ಹಿರಿಯ ಸಾಹಿತಿಗಳು, ಪರಮಪೂಜ್ಯರಾದ ಸಿದ್ದಗಂಗಾ ಶ್ರೀಗಳು, ಶಿಕ್ಷಣ ಕ್ರಾಂತಿ ಮಾಡಿದ ಸರ್ವಪಲ್ಲಿ ರಾಧಕೃಷ್ಣ ಯಾರಿಗೂ ಇಲ್ಲಿ ಜಾಗ ಇಲ್ಲ.
Advertisement
Advertisement
ಕಮಿಟಿ ಕಛೇರಿಯಲ್ಲಿದ್ದ ಕವಿಗಳು, ಸಾಹಿತಿಗಳ ಫೋಟೋಗಳಿಗೆ ಕೊಕ್ ಕೊಟ್ಟಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಸರ್ವಪಲ್ಲಿ ರಾಧಾಕೃಷ್ಣನ್ ಫೋಟೋಗಳನ್ನು ತೆರವು ಮಾಡಿದ್ದು ಶಿಕ್ಷಣ ಕಮಿಟಿಯಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅವಮಾನ ಮಾಡಲಾಗಿದೆ. ಕಮಿಟಿ ಕಛೇರಿಯಲ್ಲಿದ್ದ ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರ ಸ್ವಾಮೀಜಿಯವರ ಭಾಚಿತ್ರವನ್ನು ತೆರವು ಮಾಡಿದ್ದಾರೆ. ಸಿಎಂ, ಡಿಸಿಎಂ, ಪ್ರಧಾನಿ ಫೋಟೋ ಹಾಕದೇ ಉದ್ಧಟತನ ತೋರಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.
Advertisement
Advertisement
ಇಮ್ರಾನ್ ಪಾಷಾ ಪಕ್ಕದ ವಾರ್ಡ್ ಬಾಪೂಜಿ ನಗರದಲ್ಲೂ ಹೀಗೆ ವಿವಾದ ಎದ್ದಿತ್ತು. ರಸ್ತೆಗಳಿಗೆ ಹೆಸರು ಇಟ್ಟು ಧರ್ಮದ ಬಣ್ಣ ಹಾಕಲು ಹೊರಟಿದ್ದ ನಿದರ್ಶನವಿದೆ. ಶಿಕ್ಷಣದಲ್ಲೂ ಈ ರಾಜಕೀಯ ಬೇಕೇ? ಹಳೆ ಚಾಳಿಗಳನ್ನು ಈ ಸದಸ್ಯರು ಬಿಡುವುದಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv