ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ಒಂದೇ ಮನೆತನದ ಮೂವರು ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಮಹಾನಗರ ಪಾಲಿಕೆಯ ವಾರ್ಡ ಸಂಖ್ಯೆ 52ರಲ್ಲಿ ಪಕ್ಷೇತರ ಅಭ್ಯರ್ಥಿ ಚೇತನ ಹಿರೇಕೆರೂರ 314 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಉತ್ತರಿಸಿದ್ದಾರೆ: ಕೋಟ
ಚೇತನ ಹಿರೇಕೆರೂರ ಸಹೋದರಿ ಶೃತಿ ಚಲವಾದಿ ವಾರ್ಡ್ ನಂಬರ್ 58 ರಿಂದ ಬಿಜೆಪಿಯ ಮಹೇಂದ್ರ ಕೌತಾಳರನ್ನ ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದ 42ನೇ ವಾರ್ಡ್ ನಿಂದ ಗೆದ್ದು ಬಂದಿರುವ ಮಹದೇವಪ್ಪ ನರಗುಂದ ಚೇತನ ಹಿರೇಕೆರೂರರ ತಾತ ಆಗಿದ್ದಾರೆ.ಇದನ್ನೂ ಓದಿ: ತುಂಡುಡುಗೆ ತೊಟ್ಟು ಕಡಲ ತೀರದಲ್ಲಿ ನಿಂತ ಶ್ವೇತಾ ಶ್ರೀವಾತ್ಸವ್
ಒಂದೇ ಕುಟುಂಬದ ಮೂವರು ಸದಸ್ಯರು ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ರಾಗಿ ಸ್ಪರ್ಧಿಸಿ ಮೂವರು ವಾರ್ಡ್ ವಿಂಗಡನೆಯಾದ ನಂತರ ಮೊದಲ ಬಾರಿಗೆ ಪ್ರವೇಶ ಪಡೆದಿರುವುದು ವಿಶೇಷವಾಗಿದೆ.