– ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Hubballi Idgah Maidan )ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ (High Court) ಗ್ರೀನ್ ಸಿಗ್ನಲ್ ನೀಡದರೂ ಪಾಲಿಕೆ ಆಯುಕ್ತರು ಬಿಡುತ್ತಿಲ್ಲ.
ಈದ್ಗಾದಲ್ಲಿ ಗಣೇಶೋತ್ಸವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ವಜಾ ಮಾಡಿದೆ. ಈ ಮೂಲಕ ಪಾಲಿಕೆ ಹೊರಡಿಸಿದ್ದ ಠರಾವು ಪ್ರಕಾರ ಮೂರು ದಿನ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಇದ್ದ ಅಡೆತಡೆ ನಿವಾರಣೆಯಾಯ್ತು ಎಂದು ಎಲ್ಲರೂ ಭಾವಿಸಿದ್ರು. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಣೆ ಕೂಡ ಮಾಡಿದ್ರು.
Advertisement
Advertisement
ದಲಿತ ಸಂಘಟನೆಗಳು ಮಾತ್ರ ಈದ್ಗಾದಲ್ಲಿ ಗಣೇಶನನ್ನು ಕೂರಿಸಲು ಅವಕಾಶ ನೀಡಬಾರದು ಎಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು. ಆದರೆ ಇದಕ್ಕೆ ಮಣೆ ಹಾಕಲ್ಲ ಅಂತಾ ಮೇಯರ್ ಹೇಳಿದ್ರು. ಇಷ್ಟೆಲ್ಲಾ ಆದ್ಮೇಲೂ ಪಾಲಿಕೆ ಆಯುಕ್ತರ ತಕರಾರು ಮುಂದುವರಿದಿದೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಯುಕ್ತರು ಇನ್ನೂ ಮೀನಾಮೇಷ ಎಣಿಸ್ತಿದ್ದಾರೆ. ನನಗೆ ಇನ್ನೂ ಕೋರ್ಟ್ ಪ್ರತಿ ಸಿಕ್ಕಿಲ್ಲ ಎಂಬ ಸಬೂಬು ಹೇಳ್ತಿದ್ದಾರೆ. ಇದರಿಂದ ಕೇಸರಿ ಪಡೆ ಮತ್ತೆ ಕೆರಳಿದೆ.
Advertisement
Advertisement
ಹುಬ್ಬಳ್ಳಿ-ಗದಗ ಮುಖ್ಯರಸ್ತೆ ತಡೆದು, ಕಾಂಗ್ರೆಸ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಿಂದ ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಆಹೋರಾತ್ರಿ ಧರಣಿ ನಡೆಸಿತ್ತು. ಇದಕ್ಕೆ ಶ್ರೀರಾಮಸೇನೆ ಸೇರಿ ಹಲವು ಸಂಘಟನೆಗಳು ಸಾಥ್ ನೀಡಿದ್ದವು. ಗಣೇಶೋತ್ಸವ ಬೇಡ ಅನ್ನೋರು ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ರು.
Web Stories