– ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ ಧರ್ಮ ನಿಂದನೆ
– ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ
– ಇದು ಕಾರ್ಪೊರೇಟ್ ಜಿಹಾದ್ ಎಂದ ರಾಣೆ
ಮುಂಬೈ: ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆಂಟ್ ಸೆಂಟರ್(TCS) ಕಚೇರಿಯಲ್ಲಿ ಸಸ್ಯಾಹಾರಿಗಳಾಗಿದ್ದ ಹಿಂದೂ(Hindu) ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ ಒತ್ತಾಯಿಸಿ ನಮಾಜ್(Namaz) ಮಾಡುವಂತೆ ಸೂಚನೆ ನೀಡುತ್ತಿದ್ದ ಸ್ಫೋಟಕ ವಿಚಾರ ಈಗ ವಿಶೇಷ ತನಿಖಾ ತಂಡದ ತನಿಖೆಯ (SIT) ವೇಳೆ ಬೆಳಕಿಗೆ ಬಂದಿದೆ.
ಈ ವಿಚಾರಕ್ಕೆ ಮಹಾರಾಷ್ಟ್ರ ಸಚಿವ ನಿತೀಶ್ ರಾಣೆ(Nitesh Rane) ಈ ಪ್ರಕರಣವನ್ನು ಕಾರ್ಪೊರೇಟ್ ಜಿಹಾದ್(Corporate Jihad) ಎಂದು ಕರೆದಿದ್ದಾರೆ. ಐಟಿ ಕಂಪನಿಗಳು ಕೆಲಸ ನೀಡಲು ಇವೆಯೋ ಅಥವಾ ಜಿಹಾದ್ ಪ್ರಚಾರ ಮಾಡಲಿಕ್ಕೋ ಎಂದು ಪ್ರಶ್ನಿಸಿದ್ದಾರೆ. ಕಂಪನಿಯ ಹೆಚ್‌ಆರ್ (HR) ವಿಭಾಗವು ಈ ಚಟುವಟಿಕೆಗಳ ಬಗ್ಗೆ ಮೌನ ವಹಿಸಿದ್ದೇಕೆ ಎಂದು ಕಿಡಿಕಾರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿ ಮುಸ್ಲಿಂ ಉದ್ಯೋಗಿಗಳು ಮತ್ತು ಒಬ್ಬ ಹೆಚ್‌ಆರ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಈ ಬಗ್ಗೆ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶಿಸಿದೆ.
ಮೊದಲ ಎಫ್‌ಐಆರ್ ದಾಖಲಾದ ನಂತರ ಅದೇ ಕಂಪನಿಯ ಇತರ 8 ಮಹಿಳೆಯರು ಮತ್ತು ಒಬ್ಬ ಪುರುಷ ಉದ್ಯೋಗಿ ಧೈರ್ಯವಾಗಿ ಮುಂದೆ ಬಂದು ತಮಗೂ ಕಿರುಕುಳ ನೀಡಲಾಗುತ್ತಿದೆ ಎಂದು ದೂರು ನೀಡಿದ್ದು ಒಟ್ಟು 9 ಎಫ್‌ಐಆರ್‌ಗಳು ದಾಖಲಾಗಿವೆ. ಟಿಸಿಎಸ್ ಕಂಪನಿಯು ತನ್ನ ಎಲ್ಲಾ ಆರೋಪಿತ ಉದ್ಯೋಗಿಗಳನ್ನು ತನಿಖೆ ಮುಗಿಯುವವರೆಗೆ ಅಮಾನತುಗೊಳಿಸಿದೆ.
Pune, Maharashtra: On the case of sexual exploitation of women employees in an IT company, Minister Nitesh Rane says, “The company you mentioned is now being shut down and may close in the coming days. These companies that are attempting what we call ‘corporate jihad’, why did… pic.twitter.com/mJPeOi9o1C
— IANS (@ians_india) April 11, 2026
ಸಂತ್ರಸ್ತರು ನೀಡಿದ ದೂರಿನಲ್ಲಿ ಏನಿದೆ?
ಸಂತ್ರಸ್ತರು ತಮ್ಮ ದೂರುಗಳಲ್ಲಿ ಟಿಸಿಎಸ್ ಬಿಪಿಒ ಘಟಕದಲ್ಲಿ ತಮಗೆ ಬಲವಂತವಾಗಿ ನಮಾಜ್ ಮಾಡಿಸಲು ಪ್ರಯತ್ನಿಸಲಾಯಿತು, ಗೋಮಾಂಸ ಸೇವಿಸುವಂತೆ ಒತ್ತಾಯಿಸಲಾಯಿತು ಮತ್ತು ಹಿಂದೂ ದೇವತೆಗಳನ್ನು ಅವಮಾನಿಸಲಾಗುತ್ತಿತ್ತು.
ಆರೋಪಿಗಳು ವಾಟ್ಸಪ್ ಗುಂಪುಗಳ ಮೂಲಕ ವೈಯಕ್ತಿಕ ಸಮಸ್ಯೆ ಎದುರಿಸುತ್ತಿರುವ ಮಹಿಳಾ ಉದ್ಯೋಗಿಗಳನ್ನು ಗುರುತಿಸಿ, ಅವರಿಗೆ ಸುಳ್ಳು ಭರವಸೆ ನೀಡಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
ಆರೋಪಿಗಳು ಕಚೇರಿಯ ಅಧಿಕೃತ ಕೆಲಸದ ಹೊರತಾಗಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದರು. ಕಚೇರಿಯಲ್ಲಿ ಮಾನಸಿಕವಾಗಿ ಕುಗ್ಗಿರುವ, ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಅಥವಾ ಆರ್ಥಿಕವಾಗಿ ಹಿಂದುಳಿದಿರುವ ಹಿಂದೂ ಯುವತಿಯರನ್ನು ಈ ಗ್ರೂಪ್‌ಗಳಿಗೆ ಸೇರಿಸಿಕೊಳ್ಳಲಾಗುತ್ತಿತ್ತು.
Nagpur, Maharashtra: On the Nashik corporate case, Maharashtra CM Devendra Fadnavis says, “I had already raised the Nashik issue yesterday. We are conducting a detailed investigation, and the truth will be brought out. Action will be taken against those found guilty.” pic.twitter.com/R4QyY4cNrW
— IANS (@ians_india) April 12, 2026
ಟೀಮ್ ಲೀಡರ್‌ಗಳು ಮತ್ತು ಮ್ಯಾನೇಜರ್‌ಗಳು ಸೇರಿ ಯುವತಿಯರಿಗೆ ಉಚಿತವಾಗಿ ರೆಸಾರ್ಟ್‌ಗಳಿಗೆ ಅಥವಾ ಪ್ರವಾಸಿ ತಾಣಗಳಿಗೆ ಪ್ರವಾಸದ ಆಮಿಷವೊಡ್ಡುತ್ತಿದ್ದರು. ಇಂತಹ ಪ್ರವಾಸಗಳ ಸಮಯದಲ್ಲಿ ಯುವತಿಯರನ್ನು ಸ್ನೇಹಿತರಿಂದ ದೂರವಿರಿಸಿ, ಅವರ ಮೇಲೆ ಮತಾಂತರಕ್ಕಾಗಿ ಹೆಚ್ಚಿನ ಒತ್ತಡ ಹೇರಲಾಗುತ್ತಿತ್ತು.
ಪ್ರವಾಸದ ನೆಪದಲ್ಲಿ ಯುವತಿಯರನ್ನು ಕರೆದೊಯ್ದು ಅಲ್ಲಿ ಅವರಿಗೆ ಗೋಮಾಂಸ ತಿನ್ನಲು ಒತ್ತಾಯಿಸುವುದು ಮತ್ತು ಲೈಂಗಿಕವಾಗಿ ಶೋಷಿಸುವ ಪ್ರಯತ್ನಗಳು ನಡೆದಿದ್ದವು.
ಆರೋಪಿಗಳಿಗೆ ಕಂಪನಿಯ ಎಚ್‌ಆರ್ ವಿಭಾಗದ ಕೆಲವು ವ್ಯಕ್ತಿಗಳು ಬೆಂಬಲ ನೀಡುತ್ತಿದ್ದರು. ಪ್ರವಾಸಕ್ಕೆ ಹೋಗಲು ಒಪ್ಪದ ಅಥವಾ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯರಿಗೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿತ್ತು ಅಥವಾ ಅವರ ಸಂಬಳ ಕಡಿತಗೊಳಿಸುವಂತಹ ಕಿರುಕುಳ ನೀಡಲಾಗುತ್ತಿತ್ತು.
ಈ ಗ್ರೂಪ್‌ಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಸಂದೇಶಗಳು, ವೀಡಿಯೊಗಳು ಮತ್ತು ಆಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಹಿಂದೂ ಧರ್ಮ ಮತ್ತು ದೇವತೆಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ, ಇಸ್ಲಾಂಗೆ ಮತಾಂತರಗೊಂಡರೆ ಜೀವನದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಂಬಿಸುವ ಪ್ರಯತ್ನ ನಡೆಯುತ್ತಿತ್ತು.
#WATCH | Nashik, Maharashtra | The six accused in the alleged sexual harassment case, who were employees of an IT company, being taken to Nashik Central Jail from the Court. pic.twitter.com/xcBBXGB7co
— ANI (@ANI) April 10, 2026
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಈ ವರ್ಷದ ಮಾರ್ಚ್‌ನಲ್ಲಿ ಮಹಿಳಾ ಉದ್ಯೋಗಿಯೊಬ್ಬಳು ಧೈರ್ಯದಿಂದ ಮುಂದೆ ಬಂದು ನಾಸಿಕ್‌ನ ದೇವಲಾಲಿ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಒಬ್ಬ ಪುರುಷ ಸಹೋದ್ಯೋಗಿ ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.
ಟಿಸಿಎಸ್‌ನಂತಹ ದೊಡ್ಡ ಕಂಪನಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದ ಕಾರಣ ಪೊಲೀಸರು ಸತ್ಯಸತ್ಯತೆ ಪರಿಶೀಲಿಸಲು 42 ದಿನಗಳ ರಹಸ್ಯ ಕಾರ್ಯಾಚರಣೆಗೆ ಇಳಿದರು.
ಕಂಪನಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಪತ್ತೆಹಚ್ಚಲು 7 ಮಹಿಳಾ ಪೊಲೀಸರನ್ನು ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳಂತೆ ಆ ಕಂಪನಿಗೆ ಕಳುಹಿಸಲಾಗಿತ್ತು.
ಈ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಹಿಂದೂ ಯುವತಿಯರು ಇದ್ದಕ್ಕಿದ್ದಂತೆ ಲಿಪ್‌ಸ್ಟಿಕ್ ಬಳಸುವುದನ್ನು ನಿಲ್ಲಿಸಿರುವುದು, ಇಸ್ಲಾಮಿಕ್ ಪದ್ಧತಿಗಳನ್ನು ಪಾಲಿಸುತ್ತಿರುವುದು ಮತ್ತು ಹಿಂದೂ ಸ್ನೇಹಿತರಿಂದ ದೂರವಾಗಿರುವುದು ಪೊಲೀಸರ ಗಮನಕ್ಕೆ ಬಂದಿತು. ಇದು ವ್ಯವಸ್ಥಿತವಾದ ಮತಾಂತರದ ಪ್ರಯತ್ನ ಮತ್ತು ಬ್ಲ್ಯಾಕ್‌ಮೇಲ್ ಎನ್ನುವುದು ಪೊಲೀಸರಿಗೆ ಗೊತ್ತಾಯಿತು.
ಆರೋಪಿಗಳು ನಡೆಸುತ್ತಿದ್ದ ಒಂದು ಗುಪ್ತ ಸಭೆಯಲ್ಲಿ ಈ ಮಹಿಳಾ ಪೊಲೀಸರು ಭಾಗವಹಿಸಿದ್ದರು. ಆ ಸಭೆಯಲ್ಲಿ ಆರೋಪಿಗಳು ಮಹಿಳಾ ಉದ್ಯೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುವುದು ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ಆರೋಪಿಗಳು ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದ ಸಂದರ್ಭದಲ್ಲೇ ವೇಷದಲ್ಲಿದ್ದ ಪೊಲೀಸರು ಸ್ಥಳದಲ್ಲೇ ಆರೋಪಿಗಳನ್ನು ಹಿಡಿದಿದ್ದಾರೆ.
ಪೊಲೀಸರು ಕಚೇರಿಯ ಒಳಗಿನ 40 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ನಾಶಿಕ್ ಪೊಲೀಸ್ ಕಮಿಷನರ್ ಸಂದೀಪ್ ಕಾರ್ಣಿಕ್ ಅವರ ಮಾರ್ಗದರ್ಶನದಲ್ಲಿ ‘ಆಪರೇಷನ್ ರೈಡ್’ ಹೆಸರಿನಲ್ಲಿ ನಡೆಸಲಾಗಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆಗಾಗಿ ಎಸಿಪಿ ಸಂದೀಪ್ ಮಿಟ್ಕೆ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಲಾಗಿದೆ.

