– ಉತ್ತರ ಧ್ರುವದಿಮ್ ದಕ್ಷಿಣ ಧ್ರುವದವರೆಗೆ ಹೆಲಿಕಾಪ್ಟರ್‌ನಿಂದ ಹೂಮಳೆ
ನವದೆಹಲಿ: ನಮ್ಮನ್ನು ರಕ್ಷಿಸಲು, ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಆದರೆ ಇಂದು ಇಡೀ ದೇಶವನ್ನೇ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿವೆ.
ಈ ಬಾರಿ ಸಾಮಾನ್ಯ ಜನರ ಬದಲು, ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲಿದೆ.
Advertisement
Advertisement
ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸಲಾಗುತ್ತದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು 3 ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.
Advertisement
ಇಂದಿನ ಐತಿಹಾಸಿಕ ಕಾರ್ಯಕ್ರಮದ ಪ್ರಮುಖಕಾಂಶಗಳೇನು?
* ಬೆಳಗ್ಗೆ 9 ಗಂಟೆಗೆ ದೆಹಲಿಯ ಪೊಲೀಸ್ ಯುದ್ಧ ಮೆಮೊರಿಯಲ್ ಮೇಲೆ ಪುಷ್ಪವೃಷ್ಟಿ
* ಬೆಳಗ್ಗೆ 10-10:30 ನಡುವೆ ದೆಹಲಿ ವಿವಿಧ ಕೊರೊನಾ ಆಸ್ಪತ್ರೆಗಳ ಮೇಲೆ ಹೂಮಳೆ
* ದೆಹಲಿ ಏಮ್ಸ್, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆ, ಆರ್.ಎಂ.ಎಲ್, ಸಬ್ದರ್‍ಜಂಗ್, ಗಂಗಾ ರಾಮ್, ಬಾಬಾ ಸಾಹೇಬ್ ಅಂಬೇಡ್ಕರ್ ಮ್ಯಾಕ್ಸ್ ಸಾಕೇತ್, ರೋಹಿನಿ, ಅಪೋಲೋ, ಇಂದ್ರಪ್ರಸ್ಥ, ಸೇನಾ ಆಸ್ಪತ್ರೆ ಮೇಲೆ ಹೂಮಳೆ
Advertisement
* ಮಧ್ಯಾಹ್ನ 3:45ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಸೇನಾ ಆಸ್ಪತ್ರೆ ಮೇಲೆ ಹೂಮಳೆ
* ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಇರುವ ಎಲ್ಲ ಪ್ರಮುಖ ಕೋವಿಡ್ 19 ಪ್ರಮುಖ ಆಸ್ಪತ್ರೆಗಳಿಗೆ ವಾಯುಸೇನೆ ಪುಷ್ಪನಮನ
* ಸಂಜೆ ನೌಕಾಸೇನೆಯಿಂದ ಎಲ್ಲಾ ನೌಕಾನೆಲೆಯಲ್ಲಿ, ಹಡಗುಗಳಲ್ಲಿ ದೀಪ ಉರಿಸುವುದು
* ನೌಕಾನೆಲೆಗಳಲ್ಲಿ ಮೌಂಟೇನ್ ಬ್ಯಾಂಡ್ ನುಡಿಸುವುದು
ಪ್ರತಿ ಬಾರಿ ನಾವು ಗೌರವಿಸುವ ಮೂರು ಸೇನೆಗಳು ಇಂದು ಸ್ವತಃ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿರವುದು ವಿಶೇಷ. ಈ ದಿನ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಲಿದೆ.