ವಿಜಯಪುರ: ವಿಜಯಪುರದಲ್ಲಿ ಶುಕ್ರವಾರ ಒಂದು ಲಕ್ಷ ಲಸಿಕಾ ದಿನ ಆಚರಿಸಲಾಯಿತು. ಈ ವೇಳೆ ನಾನು ಕೊರೊನಾ ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಅಜ್ಜಿ, ಅಜ್ಜ ನಿರಾಕರಿಸಿದ್ದಾರೆ.
Advertisement
ಒಂದಲ್ಲಾ ಒಂದು ದಿನ ಸಾಯಲೇ ಬೇಕೆಂದು ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವಯೋವೃದ್ಧೆ ಮತ್ತು ವೃದ್ಧ ಪಟ್ಟು ಹಿಡಿದು ಕುಳಿತ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಕೇಶ್ವರ ಗ್ರಾಮದಲ್ಲಿ ಜರುಗಿದೆ. ಇದನ್ನೂ ಓದಿ: ಭಾನುವಾರ ಮನೆ ಬಿಟ್ಟಿದ್ದ ಮನೆ ಯಜಮಾನ ನಿನ್ನೆ ವಾಪಸ್ ಬಂದಾಗ ಕಂಡಿದ್ದು ಐವರ ಮೃತದೇಹ
Advertisement
Advertisement
ಲಸಿಕೆ ಹಾಕಿಸಿಕೊಳ್ಳಲು ವಯೋವೃದ್ಧೆಯ ಮನವೊಲಿಸಲು ಗಾಮ್ರ ಪಂಚಾಯತಿ ಪಿಡಿಓ ಸುಜಾತಾ ಯಡ್ರಾವಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೈ ಹಿಡಿದು ಕರೆದುಕೊಂಡು ಹೋಗಿ ಲಸಿಕೆ ಹಾಕಿಸುತ್ತೇವೆ ಎಂದರೂ, ಅಜ್ಜಿ ನಿರಾಕರಿಸಿದ್ದಾರೆ. ಅಲ್ಲದೇ ನನಗೆ ಕಣ್ಣು ಕಾಣಿಸುವುದಿಲ್ಲ. ನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನಾನು ಸಾಯುವುದಕ್ಕೆ ಎಂದೇ ಕುಂತಿರುವೆ ಎಂದು ಪಟ್ಟು ಹಿಡಿದಿದ್ದಾರೆ. ಆಗ ಲಸಿಕೆ ಹಾಕಿಸಿ ಕೊಂಡರೆ ಕೊರೊನಾದಿಂದ ನಿನಗೂ ಸುರಕ್ಷತೆ. ನಿನ್ನಿಂದ ಇತರರಿಗೂ ಸುರಕ್ಷೆ ಎಂದು ಪಿಡಿಒ ಸುಜತಾ ಮನವರಿಕೆ ಮಾಡಿದರೂ ಅಜ್ಜ, ಅಜ್ಜಿ ಡೋಂಟ್ ಕೇರ್ ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ
Advertisement