ಬೆಂಗಳೂರು: ರಾಜ್ಯದಲ್ಲಿ ಇಂದು ಹತ್ತು ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ಇವತ್ತು 418ಕ್ಕೆ ಏರಿಕೆಯಾಗಿದೆ.
ವಿಜಯಪುರದಲ್ಲಿ ಮೂರು ಮಂದಿ, ಕಲಬುರಗಿಯಲ್ಲಿ 3 ಮೈಸೂರಿನ ನಂಜನಗೂಡಿನಲ್ಲಿ 2, ದಕ್ಷಿಣ ಕನ್ನಡ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
Advertisement
Advertisement
ಇದುವರೆಗೂ ಬೆಂಗಳೂರಿನಲ್ಲಿ 89 ಮಂದಿಗೆ ಕೊರೊನಾ ಬಂದಿದ್ದು, ಅವರಲ್ಲಿ 48 ಮಂದಿ ಡಿಸ್ಚಾರ್ಜ್ ಆಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ 37 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ 55 ಮಂದಿಗೆ ಕೊರೊನಾ ಸೋಂಕು ಇದೆ. ಈ ಹಿಂದೆ 86 ಮಂದಿ ಸೋಂಕು ಬಂದಿದ್ದು, ಅವರಲ್ಲಿ 31 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಬಳ್ಳಾರಿಯಲ್ಲಿ 39 ಕೊರೊನಾ ಪ್ರಕರಣ ದಾಖಲಾಗಿದೆ. ಇನ್ನೂ ವಿಜಯಪುರದಲ್ಲಿ 33, ಕಲಬುರಗಿಯಲ್ಲಿ 23 ಮಂದಿಗೆ ಕೊರೊನಾ ಸೋಂಕು ಇದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಮೈಸೂರಿನಲ್ಲಿದ್ದಾರೆ. ಒಟ್ಟು ರಾಜ್ಯದಲ್ಲಿ 17 ಮಂದಿ ಮೃತಪಟ್ಟಿದ್ದು, 129 ಮಂದಿ ಮೃತಪಟ್ಟಿದ್ದಾರೆ.
Advertisement
ಸೋಂಕಿತರ ವಿವರ:
1. ರೋಗಿ 409: 67 ವರ್ಷದ ವೃದ್ಧೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ. ತೀವ್ರ ಉಸಿರಾಟದ ತೊಂದರೆ
2. ರೋಗಿ 410: 18 ವರ್ಷದ ಯುವತಿ, ವಿಜಯಪುರ ನಿವಾಸಿ, ರೋಗಿ 306ರ ಜೊತೆ ಸಂಪರ್ಕ
3. ರೋಗಿ 411: 30 ವರ್ಷದ ಮಹಿಳೆ, ವಿಜಯಪುರ ನಿವಾಸಿ, ರೋಗಿ 306ರ ಜೊತೆ ಸಂಪರ್ಕ
4. ರೋಗಿ 412: 29 ವರ್ಷದ ಯುವಕ, ಕಲಬುರಗಿ ನಿವಾಸಿ, ಅನಾರೋಗ್ಯದಿಂದ ಬಳಲುತ್ತಿದ್ದ.
5 ರೋಗಿ 413: 61 ವರ್ಷದ ವೃದ್ಧ, ಕಲಬುರಗಿ ನಿವಾಸಿ, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
6. ರೋಗಿ 414: 80 ವರ್ಷದ ವೃದ್ಧ, ಕಲಬುರಗಿ ನಿವಾಸಿ, ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ ಕಾಣಿಸಿಕೊಂಡಿದೆ.
7. ರೋಗಿ 415: 18 ವರ್ಷದ ಯುವತಿ, ವಿಜಯಪುರ, ರೋಗಿ 306ರ ಜೊತೆ ಸಂಪರ್ಕ
8. ರೋಗಿ 416: 26 ವರ್ಷದ ಯುವಕ, ಮೈಸೂರಿನ ನಂಜನಗೂಡಿನ ನಿವಾಸಿ, ರೋಗಿ 52ರ ದ್ವಿತೀಯ ಸಂಪರ್ಕ
9. ರೋಗಿ 417: 26 ವರ್ಷದ ಯುವಕ, ಮೈಸೂರಿನ ನಂಜನಗೂಡಿನ ನಿವಾಸಿ, ರೋಗಿ 52ರ ದ್ವಿತೀಯ ಸಂಪರ್ಕ
10. ರೋಗಿ 418: 25 ವರ್ಷದ ಯುವತಿ, ಬೆಳಗಾವಿ ನಿವಾಸಿ, ರೋಗಿ 293ರ ಸಂಪರ್ಕ